ಶುಕ್ರವಾರ, ಜನವರಿ 17, 2020
20 °C

16ರಿಂದ ಲೋಕಾಯುಕ್ತ ದೂರು ಸ್ವೀಕಾರ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಡಿಸೆಂಬರ್‌ 16ರಿಂದ 19ರ ವರೆಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಸಂಚರಿಸಲಿದ್ದು, ಆಯಾ ತಾಲ್ಲೂಕುಗಳ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೂ ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಬಹುದು ಎಂದು ಲೋಕಾಯುಕ್ತ ಅಧೀಕ್ಷಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಗುಲ್ಬರ್ಗ ಲೋಕಾಯುಕ್ತ ಪಿಐ ಜೇಮ್ಸ್‌ ಲಾಯ್‌ ಕ್ಸೇವಿಯರ್‌ 16ರಂದು ಅಫ­ಜಲ­ಪುರ, 19ರಂದು ಜೇವರ್ಗಿಗೆ ಆಗಮಿಸುವರು. ಲೋಕಾಯುಕ್ತ ಪಿಐ ತಮ್ಮ­ರಾಯ ಪಾಟೀಲ 16ರಂದು ಚಿತ್ತಾಪುರ, 18ರಂದು ಸೇಡಂಗೆ ಆಗಮಿಸುವರು. ಲೋಕಾ­ಯುಕ್ತ ಪಿಐ ಶಾಂತಿನಾಥ ಬಿ.ಪಿ. 18ರಂದು ಚಿಂಚೋಳಿಗೆ ಬರುವರು. ಲೋಕಾಯುಕ್ತ ಡಿಎಸ್‌ಪಿ ಜಿ.ಜಿ. ಮರಿಬಾ 19ರಂದು ಆಳಂದಕ್ಕೆ ಆಗಮಿಸುವರು ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)