ಬುಧವಾರ, ಜನವರಿ 29, 2020
27 °C

ಏಕತೆಗಾಗಿ ಮಿಂಚಿನ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಚುಮುಚುಮು ಚಳಿ­ಯನ್ನೂ ಲೆಕ್ಕಿಸದೇ ನೂರಾರು ಯುವ­ಕರು,   ಜನಪ್ರತಿನಿಧಿಗಳು ಭಾನು­ವಾರ ಬೆಳಿಗ್ಗೆ ಮಿಂಚಿನ ಓಟದಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಮಂತ್ರ ಜಪಿಸಿದರು.ಸರ್ದಾರ್ ವಲ್ಲಭಭಾಯಿ ಪಟೇ­ಲರ ರಾಷ್ಟ್ರೀಯ ಏಕತಾ ಪ್ರತಿಮೆಯ ಲೋಹ ಸಂಗ್ರಹಣಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ‘ಏಕತಾ ಓಟ’ದಲ್ಲಿ ಅನೇಕರು ಪಾಲ್ಗೊಂಡಿದ್ದರು.ನಗರದ ಸೂಪರ್ ಮಾರ್ಕೆಟ್‌­ನಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಆಯೋಜಿಸಿದ್ದ ಏಕತಾ ಓಟಕ್ಕೆ ಸ್ವಾತಂತ್ರ್ಯ ಹೋರಾಟ­ಗಾರ ಅನಂತಶರ್ಮಾ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ‘ಪಟೇಲರು ಎಲ್ಲ ಸಂಸ್ಥಾನಗಳನ್ನು ಒಗ್ಗೂಡಿ­ಸುವಲ್ಲಿ ಅಪಾರ ಶ್ರಮ ವಹಿಸಿದ್ದರು. ಹೈದರಾಬಾದ್ ಕರ್ನಾ­ಟಕ ಭಾಗಕ್ಕೆ ಸ್ವಾತಂತ್ರ್ಯ, ವಿಮೋಚನೆ ದೊರಕಲು ಅವರೇ ಕಾರಣರಾಗಿ­ದ್ದಾರೆ. ನವಾಬರು ಆಳಿದ ನಾಡಿನಲ್ಲಿ ಏಕೀಕರಣ ಮಂತ್ರ ಜಪಿಸಿದ ಪಟೇಲರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಪಟೇಲರು ಹೋರಾಟ ಕೈಗೊಳ್ಳದೇ ಹೋದಲ್ಲಿ ನಮಗೆ ಸ್ವಾತಂತ್ರ್ಯ ಸಿಗು­ತ್ತಿತ್ತೋ ಇಲ್ಲವೋ ಎಂಬ ಪ್ರಶ್ನೆ ಇಂದಿಗೂ ಕಾಡುತ್ತಿತ್ತು’ ಎಂದು ಅಭಿಪ್ರಾಯ­ಪಟ್ಟರು.‘ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕೆಲವರು ನಿಜಾಮರ ಗುಣಗಾನ ಮಾಡು­ತ್ತಿರುವುದುಖೇದಕರ ವಿಷಯ. ನಿಜಾಮರ ಆಡಳಿತ ಅವಧಿಯಲ್ಲಿ ಎಲ್ಲ ಮುಸ್ಲಿಂರೂ ತೃಪ್ತಿಕರವಾಗಿದ್ದರು ಎಂದೇನೂ ಇಲ್ಲ. ಬಹಳಷ್ಟು ಸಮಸ್ಯೆ­ಗಳು ಇಂದು ದೇಶವನ್ನು ಕಾಡುತ್ತಿವೆ. ಭಯೋತ್ಪಾದಕ ಸಂಘಟನೆಗಳು ದೇಶ­ವನ್ನು ಅಸ್ತಿರಗೊಳಿಸುವ ಹುನ್ನಾರ ನಡೆಸಿವೆ. ಇದನ್ನು ಎಲ್ಲರೂ ಸೇರಿ ಹತ್ತಿ­ಕ್ಕ­ಬೇಕಾಗಿದೆ. ಆದ್ದರಿಂದ ಯುವಕರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.ಲೋಹ ಸಂಗ್ರಹಣಾ ಸಮಿತಿ ಸಂಚಾಲಕ ಹಾಗೂ ಮಾಜಿ ಶಾಸಕ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ‘560 ಸಂಸ್ಥಾನಗಳನ್ನು ಒಗ್ಗೂಡಿಸುವ ಮೂಲಕ ಪಟೇಲರು ಏಕೀಕರಣಕ್ಕೆ ನಾಂದಿ ಹಾಡಿದ್ದರು. ಹೀಗಾಗಿ, ಗುಜರಾತ್‌ನಲ್ಲಿ 182 ಅಡಿ ಎತ್ತರದ ಪಟೇಲರ ಪ್ರತಿಮೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಜನವರಿ 15 ರಿಂದ 26ರ ವರೆಗೆ ಲೋಹ ಸಂಗ್ರಹಣೆ ಮಾಡಲಾಗು­ವುದು. ಯುವಶಕ್ತಿ ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಅಮರನಾಥ ಪಾಟೀಲ, ಮಾಜಿ ಶಾಸಕ ಶಶೀಲ್್ ಜಿ.ನಮೋಶಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಸಮಿತಿ ಸಹ ಸಂಚಾಲಕ ವಿದ್ಯಾಸಾಗರ ಶಹಾಬಾದಿ, ವಿಜಯಕುಮಾರ ಸೇವಲಾನಿ, ಬಿ.ಜಿ.ಪಾಟೀಲ, ರಾಜಗೋಪಾಲ­ರೆಡ್ಡಿ, ನಾಮದೇವ ರಾಠೋಡ, ವಿದ್ಯಾಸಾಗರ ಕುಲಕರ್ಣಿ, ಸಂಜೀವ ಯಾಕಾಪುರ, ಅಣ್ಣಾರಾವ ಧುತ್ತರಗಾಂವ್, ಹಣಮಂತ ಪಾಟೀಲ ಇತರರು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)