ಶುಕ್ರವಾರ, ಜನವರಿ 24, 2020
27 °C
ಸರ್ಕಾರಿ ಬಸ್‌ಗಳಿಲ್ಲ ಟಂಟಂಗಳೇ ಎಲ್ಲ

ನೂರಾರು ಸಮಸ್ಯೆಗಳ ಮರಗುತ್ತಿ ಗ್ರಾಮ

ಪ್ರಜಾವಾಣಿ ವಾರ್ತೆ/ಮಲ್ಲಿಕಾರ್ಜುನ ಮೂಲಗಿ Updated:

ಅಕ್ಷರ ಗಾತ್ರ : | |

ನೂರಾರು ಸಮಸ್ಯೆಗಳ ಮರಗುತ್ತಿ ಗ್ರಾಮ

ಕಮಲಾಪುರ: ಸಮೀಪದ ಮರಗುತ್ತಿ ಗ್ರಾಮದಲ್ಲಿ ನೂರಾರು ಸಮಸ್ಯೆಗಳಿವೆ. ಗ್ರಾಮಕ್ಕೆ ಸರ್ಕಾರಿ ಬಸ್‌ ಸೌಲಭ್ಯವಿಲ್ಲ. ಜನ ಖಾಸಗಿ ಟಂಟಂಗಳನ್ನೇ ಅವಲಂಬಿಸಬೇಕಾಗಿದೆ.ಗ್ರಾಮದ ಜನಸಂಖ್ಯೆ ನಾಲ್ಕು ಸಾವಿರಕ್ಕೂ ಅಧಿಕ. ಇಲ್ಲಿನ  ಜನತೆಗೆ ಕುಡಿಯಲು ನೀರಿಲ್ಲ, ದೂರದಿಂದ ನೀರು ತರಬೇಕು. ಒಂದು ಕೊಳವೆ ಬಾವಿ ಮತ್ತೆರೆಡು ತೆರೆದ ಬಾವಿಗಳು ಮಾತ್ರ ಬಳಕೆಯಲ್ಲಿವೆ. ಬೇಸಿಗೆಯಲ್ಲಿ ಅವು ಬತ್ತಿಹೋಗು­ತ್ತವೆ. ಮಹಿಳಾ ಶೌಚಾಲಯಗಳಿಲ್ಲ. ಸರಿಯಾದ ಚರಂಡಿಯ ವ್ಯವಸ್ಥೆಯಿಲ್ಲ. ಚರಂಡಿ ನೀರು ರಸ್ತೆಯ ಮಧ್ಯದಲ್ಲಿ ಹರಿಯುತ್ತದೆ.ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯಗಳಿವೆ. ಆದರೆ ನೀರಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಸರ್ಕಾರಿ ಪ್ರೌಢ ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ 10 ಕಂಪ್ಯೂಟರ್‌ಗಳು ಬಂದಿವೆ. ಹೇಳಿಕೊಡುವ ಶಿಕ್ಷಕರು ಇಲ್ಲ. ಕಂಪ್ಯೂಟರ್‌ಗಳೆಲ್ಲ ದೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿವೆ.ತಾಲ್ಲೂಕು ಪಂಚಾಯಿತಿಯಿಂದ ಮರಗುತ್ತಿ ಗ್ರಾಮ ಮತ್ತು ತಾಂಡಾದ ಸಾರ್ವಜನಿಕರಿಗೆ ಕುಡಿಯುವ ನೀರಿನ ಕಾಮಗಾರಿ ಕಳಪೆಯಾಗಿದ್ದು, ಹಣ ನುಂಗಿ ಹಾಕಿದ್ದಾರೆ. ಜಿಲ್ಲಾ ಪಂಚಾಯಿತಿ ಯೋಜನೆಯಿಂದ ಸರ್ಕಾರಿ ವಸತಿ ನಿಲಯಕ್ಕೆ ಬಂದಿರುವ ₨3.50 ಲಕ್ಷ ₨60 ಸಾವಿರ ಮಾತ್ರ ಖರ್ಚು ಮಾಡಿ ಉಳಿದ್ದನ್ನು ನುಂಗಿಹಾಕಿದ್ದಾರೆ’  ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಧರ್ಮರಾಯ ದೂರುತ್ತಾರೆ.ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿದ್ದರೂ ಸುತ್ತಲೂ ತಿಪ್ಪೆಗುಂಡಿಗಳಿವೆ. ಖಾಸಗಿ ಕಟ್ಟಡದಲ್ಲಿ ಮಕ್ಕಳು ಓದು­ತ್ತಿದ್ದಾರೆ. ಗ್ರಾಮ ಪಂಚಾಯಿತಿ ಅವುಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಚಿತ್ತರಂಜನ್ ಟೈಗರ್                 ಆಗ್ರಹಿಸುತ್ತಾರೆ.ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ಉಪಯೋಗಕ್ಕಿಲ್ಲದಂತಾಗಿದೆ. ಡಾಕ್ಟರ್ ಯಾವಾಗಲಾದರೊಮ್ಮೆ ಬಂದು   ಹೋಗುತ್ತಾರೆ. 

ಇಲ್ಲಿನ ಪಶು ಆಸ್ಪತ್ರೆಗೆ ಡಾಕ್ಟರ್ ಇಲ್ಲ. ಹೀಗಾಗಿ ಮರಗುತ್ತಿ ಗ್ರಾಮ ಸಮಸ್ಯೆಗಳ ಆಗರವಾಗಿದೆ.

 

‘ಮರಗುತ್ತಿಯಲ್ಲಿ ಕುಡಿಯುವ ನೀರಿನ ತ್ರಾಸ್‌ ಬಾಳಾ ಅದರಿ. ಒಂದ ಕುಟುಂಬಕ್ಕ ಇಪ್ಪತ್ತು ಕೊಡ

ನೀರು ಸಾಕಾಗೊಲ್ಲಾರಿ, ದೂರದ ತೋಟ, ಗದ್ದೆ ನಿೀರು ತಂದು ಜೀವನ ಸಾಗಸೂದಾಗೇದ’.

–ಬಂಡಮ್ಮ, ಗ್ರಾಮದ ಹಿರಿಯ ವೃದ್ಧೆ

‘ದಾಖಲೆಗಳಲ್ಲಿ  ಮಾತ್ರ ಸಾಕಷ್ಟು ಅಭಿ­ವೃದ್ಧಿ ಕಾರ್ಯಗಳು ನಡೆಯುತ್ತಿವೆ.’

–ಪಾಂಡುರಂಗ ಟೆಂಗಳಿ,

ಗ್ರಾಮ ಪಂಚಾಯಿತಿ ಸದಸ್ಯ

‘ಗ್ರಾಮದ ಹೊಸ ಬಡಾ­ವಣೆಗಳ 40 ಮನೆಗಳಿಗೆ ವಿದ್ಯುತ್‌ ವ್ಯವಸ್ಥೆ ಇಲ್ಲ. ನಿತ್ಯವೂ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ.’

–ಚಿತ್ತರಂಜನ್ ಟೈಗರ್‌ ಬಿಎಸ್‌ಪಿ ಮುಖಂಡ

ಪ್ರತಿಕ್ರಿಯಿಸಿ (+)