ಭಾನುವಾರ, ಜನವರಿ 26, 2020
28 °C

‘ಕ್ರೀಡಾ ಸಂಸ್ಕೃತಿ ಬೆಳೆಯಲು ಸಹಕರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನೆಹರು ಯುವ ಕೇಂದ್ರ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಯುವಕ ಸಂಘ ಬ್ರಹ್ಮಪುರ ವತಿಯಿಂದ ನಗರದ ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾ­ವಿದ್ಯಾಲ­ಯದಲ್ಲಿ ಭಾನುವಾರ ಯುವ ಸಂಘ­ಗಳಿಗೆ ಕ್ರೀಡಾ ಸಾಮಗ್ರಿಗಳ ವಿತ­ರಣಾ ಕಾರ್ಯಕ್ರಮವನ್ನು ಜರುಗಿತು.ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುಭಾಷ ಎ.ವಗ್ಗನಕರ್‌ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉಳಿಸಲು ಯುವ ಜನಾಂಗ ಸಹಕರಿಸಬೇಕು ಮತ್ತು ನಿಜವಾದ ಯುವಕ ಸಂಘಗಳಿಗೆ ಸರ್ಕಾರದ ಸೌಲಭ್ಯಗಳು ಹೆಚ್ಚಿನ ರೀತಿಯಲ್ಲಿ ದೊರೆಯುಂತಾಗಬೇಕು ಎಂದರು.ಯುವಕ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರ ನಾಯಕರನ್ನು ಒಂದೇ ಜಾತಿಗೆ ಸೀಮಿತ ಮಾಡಿ  ಅವರ ಹೆಸರಿನ ಮೇಲೆ ಯುವಕ ಸಂಘಗಳನ್ನು ಸ್ಥಾಪಿಸುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.ಶಾರದಾ ವಿವೇಕ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹಣಮಂತ ಗುಡ್ಡೆವಾಡಿ ಅಧ್ಯಕ್ಷತೆ ವಹಿಸಿದ್ದರು. ಉಪಾನ್ಯಸಕಿ ಭಾಗೀರಥಿ, ಎಂ.ಕೆ.ಪಾಟೀಲ, ಶರಣಬಸಪ್ಪಾ ಜಮಾದಾರ, ಎನ್‌.ಎಫ್‌ ಸುತ್ತಾರ, ಗುರುರಾಜ ಪಾಟೀಲ್‌ ಉಪಸ್ಥಿತರಿದ್ದರು. ಪೂಜಾ ಸ್ವಾಗತಿಸಿದರು. ವಿದ್ಯಾವತಿ ನಿರೂಪಿಸಿದರು. ಮಂಜುಳಾ ವಂದಿಸಿದರು.

ಪ್ರತಿಕ್ರಿಯಿಸಿ (+)