ಶನಿವಾರ, ಜನವರಿ 18, 2020
19 °C

ಸಿಇಟಿ ಕಾಯ್ದೆ: ಎಬಿವಿಪಿ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವೃತ್ತಿಪರ ಶಿಕ್ಷಣದ ಸಿಇಟಿ ಪ್ರವೇಶ 2006ರ ಕಾಯ್ದೆ ಅನುಷ್ಠಾನ­ಗೊಳಿಸುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಗುಲ್ಬರ್ಗ ಶಾಖೆ ಕಾರ್ಯಕರ್ತರು ಬುಧ­ವಾರ ಪ್ರತಿಭಟನೆ ನಡೆಸಿದರು.2006ರ ಸಿಇಟಿ ಕಾಯ್ದೆಯು ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗಿದ್ದು, ಅವರ ಶೈಕ್ಷಣಿಕ ಹಕ್ಕುಗಳನ್ನು ಮೊಟಕು­ಗೊಳಿಸುವ ಸರ್ಕಾರದದ ಈ ನೀತಿಯು ವಿದ್ಯಾರ್ಥಿ ಹಾಗೂ ಶಿಕ್ಷಣ ವಿರೋಧಿ­ಯಾಗಿದೆ ಎಂದು ವಿವರಿಸಿದರು.ಈ ಕಾಯ್ದೆ ಜಾರಿಯಿಂದ ಸರ್ಕಾರಿ ಕೋಟಾ­ಗಳೆಲ್ಲವೂ ಖಾಸಗಿಯವರ ಪಾಲಾ­ಗುತ್ತವೆ. ಖಾಸಗಿಯವರು ಬೇಕಾ­ಬಿಟ್ಟಿ ಶುಲ್ಕ ವಸೂಲಿ ಮಾಡಿಕೊಳ್ಳಲು ದಾರಿ ಮಾಡಿದಂತಾಗುತ್ತದೆ. ಶುಲ್ಕದಲ್ಲಿ ಏಕರೂಪತೆ ಇಲ್ಲದಿರುವುದರಿಂದ ಬಡ ಪ್ರತಿಭಾವಂತರು ಅವಕಾಶ ಕಳೆದುಕೊ­ಳ್ಳುವ ಸನ್ನಿವೇಶ ಸೃಷ್ಟಿಸಿದಂತಾಗುತ್ತದೆ ಎಂದು ಆರೋಪಿಸಿದರು.ನಗರ ಕಾರ್ಯ­ದರ್ಶಿ ಅರುಣ ಪಾಟೀಲ, ಭಾಗಣ್ಣ ಪ್ರತಿಭಟನೆ ನೇತೃತ್ವ ವಹಿಸಿದ್ದರು. ವಿದ್ಯಾನಂದ, ಅಂಬೂಜಿ, ಆನಂದ ಕಪನೂರ, ಸಂಗಮೇಶ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)