ಸೋಮವಾರ, ಜನವರಿ 27, 2020
26 °C

‘ಅಭಿವೃದ್ಧಿ ಸಹಿಸದ ಬಿಜೆಪಿ ನಾಯಕರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ‘ಬಿಜೆಪಿ ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷದಲ್ಲಿ ಮಾಡದ ಕೆಲಸ ಕೇವಲ ಆರು ತಿಂಗಳಲ್ಲೇ ಮಾಡಿದ್ದೇನೆ. ಅಭಿವೃದ್ಧಿ ಸಹಿಸದ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.  ಧೈರ್ಯ ಇದ್ದರೇ  ಅವರು ಬಹಿರಂಗ ಚರ್ಚೆಗೆ ಬರಲಿ’ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಬಹಿರಂಗ ಸವಾಲು ಹಾಕಿದರು.ಪಟ್ಟಣ ಸಮೀಪದ ಚಿತ್ತಾಪುರ ಪುರಸಭೆಯ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದೇನೆ ಎಂದು ಹೇಳುವ ಮಾಜಿ ಶಾಸಕ ವಾಲ್ಮೀಕ ನಾಯಕ ಅವರು, ತಮ್ಮ ಪಾಲಿನ ಹಫ್ತಾ ವಸೂಲಿ ಮಾಡಿದ್ದಾರೆ’ ಎಂದು ನೇರ ಆರೋಪ ಮಾಡಿದರು,‘ಅಧಿಕಾರಿಗಳೇ ಹಫ್ತಾ ಬಗ್ಗೆ ಹೇಳಿಕೊಂಡಿದ್ದಾರೆ. ಇದರಿಂದ ಇಲ್ಲಿಯ­ವರೆಗೆ ಯಾವುದೇ ಕಾಮಗಾರಿ ಪೂರ್ಣ­ಗೊಂಡಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ನಾನು ಸುಧಾರಣೆ ಮಾಡುವಂಥ ಪರಿಸ್ಥಿತಿ ನಿರ್ಮಾಣ­ವಾಗಿದೆ’ ಎಂದು ವಾಲ್ಮೀಕ ವಿರುದ್ಧ  ವಾಗ್ದಾಳಿ ನಡೆಸಿದರು.‌ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರ್‌, ಪಟ್ಟಣದ ಕಡುಬಡವರಿಗೆ ವಸತಿ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ­ಗಳ ಮನವಿ ಪತ್ರವನ್ನು ಶಾಸಕ­ರಿಗೆ ಸಲ್ಲಿಸಿದರು.ಚಿತ್ತಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣಾ ಸಾಲಿ, ನಾಗರಡ್ಡಿ ಕರದಾಳ, ಮುಕ್ತಾರ ಪಟೇಲ ಮಾತನಾಡಿದರು.ಪುರಸಭೆ ಉಪಾಧ್ಯಕ್ಷ ನಾಗರಾಜ ಕಡಬೂರ್‌, ಸದಸ್ಯ ಸುರೇಶ ಬೆನಕನಳ್ಳಿ ಮತ್ತು ವಾಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಾಫರ್‌ ಪಟೇಲ, ಕಾಂಗ್ರೆಸ್‌ ಮುಖಂಡ­ರಾದ ಸೋಮಶೇಖರ ಪಾಟೀಲ, ಅಜೀಜ ಸೇಠ, ಶೀಲಾ ಕಾಶಿ ಇದ್ದರು. ಪುರಸಭೆ ಮುಖ್ಯಾಧಿಕಾರಿ ಅಶೋಕ ಬೆಲಗುಂದಿ ಸ್ವಾಗತಿಸಿ, ವೆಂಕ­ಟೇಶ ಗುತ್ತೇದಾರ್‌ ನಿರೂಪಿಸಿದರು.

ಪ್ರತಿಕ್ರಿಯಿಸಿ (+)