ಮಂಗಳವಾರ, ಜನವರಿ 21, 2020
29 °C

‘ಸಿರಿವಂತರ ಆಡಂಬರ ಬಡವರಿಗೆ ಶಾಪ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಶ್ರೀಮಂತರ ಮದುವೆ ಆಡಂಬರಗಳನ್ನೇ ಆದರ್ಶಗಳು ಎಂದು ಕೊಂಡು ಅವುಗಳನ್ನು ಅನುಸರಿಸುವ ಮೂಲಕ ಬಡವರು ಸಂಕಷ್ಟಗಳಿಗೆ ಒಳಗಾಗುತ್ತಿದ್ದಾರೆ ಎಂದು ಗುಲ್ಬರ್ಗ ಎಂಎಸ್‌ಐ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಬಾಳಿ ಬೇಸರ ವ್ಯಕ್ತಪಡಿಸಿದರು.



ನಗರದ ಜೆಎಸ್‌ಎಸ್‌ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಗುರುವಾರ ನಡೆದ ಕದಳಿ ಮಹಿಳಾ ವೇದಿಕೆಯ 13ನೇ ವಾರ್ಷಿಕೋತ್ಸವದಲ್ಲಿ ಅವರು ‘ಕದಳಿಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.



ಸಿರಿವಂತರ ವಿವಾಹ ವೈಭೋಗಗಳು ಬಡವರ ಮನೆಯ ಹೆಣ್ಣುಮಕ್ಕಳಿಗೆ ಶಾಪವಾಗಿ ಪರಿಣಮಿಸಿವೆ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುವ ಉದ್ದೇಶದಿಂದ ಬಡವರು ಸಾಲಸೋಲ ಮಾಡಿ ಕಷ್ಟಗಳಿಗೆ ಗುರಿಯಾಗುತ್ತಾರೆ ಎಂದು ತಿಳಿಸಿದರು.



ನಾಡಿನಲ್ಲಿ ಶೇ 68ರಷ್ಟು ಮಹಿಳೆ ಯರು ರಕ್ತಹೀನತೆಯಿಂದ ಬಳಲು ತ್ತಿದ್ದು, ಇದರಲ್ಲಿ ಮಧ್ಯಮ, ಮೇಲ್ಮಧ್ಯ ಮವರ್ಗದ ಮಹಿಳೆಯರ ಪ್ರಮಾಣ ಜಾಸ್ತಿ ಇದೆ. ಸ್ತ್ರೀಯರು ಆಚರಿಸುವ ಉಪವಾಸ, ವ್ರತ, ಒಪ್ಪೊತ್ತು ನೇಮ ಇತ್ಯಾದಿ ಸಾಂಪ್ರಾದಾಯಿಕ ಚೌಕಟ್ಟು ಗಳು ಈ ಸಮಸ್ಯೆಗೆ ಕಾರಣವಾಗಿವೆ. ಪುರುಷ ಮೂಲದ  ವಿದ್ಯಮಾನಗಳ ಮೂಲಕವೇ ಇಂದಿಗೂ ಮಹಿಳೆ ತನ್ನನ್ನು ಪರಿಚಯಿಸಿಕೊಳ್ಳುವ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.



ಪುರುಷ ಪ್ರಧಾನ ವ್ಯವಸ್ಥೆಯ ಅಹಂ ಅನ್ನು ಧಿಕ್ಕರಿಸಿ, ಸಾಮಾಜಿಕ ಚೌಕಟ್ಟು ಮೀರಿದ ಬದುಕನ್ನು ಸವೆಸಿದ ಶ್ರೇಷ್ಠ ಮಹಿಳೆ ಅಕ್ಕಮಹಾದೇವಿ. ಲಿಂಗನಿರಪೇಕ್ಷಿತ ನಿಲುವು ಸಮಾಜದಲ್ಲಿ ಬಿತ್ತಲು ಅಕ್ಕ ಶ್ರಮಿಸಿದಳು. 12ನೇ ಶತಮಾನದ ವಚನ ಪರಂಪರೆಯ ನಿಲುವುಗಳ ಅನುಸಂಧಾನದ ನಿಟ್ಟಿನಲ್ಲಿ ವ್ಯಾಪಕ ಕೆಲಸಗಳು ಆಗಬೇಕಿದೆ. ಜಗತ್ತಿನ ಕಟ್ಟಕಡೆಯ ವ್ಯಕ್ತಿಗೂ ವಚನ ಸಾಹಿತ್ಯ ತಲುಪಿಸುವ ಅಗತ್ಯ ಇದೆ ಎಂದರು.

ಪ್ರತಿಕ್ರಿಯಿಸಿ (+)