ಗುರುವಾರ , ಜನವರಿ 23, 2020
26 °C

‘ಡಿಎಆರ್’ ಸಮಗ್ರ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನು­ವಾರ ಮುಕ್ತಾಯವಾದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ­ದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಸಮಗ್ರ ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.ವೈಯಕ್ತಿಕ ವಿಭಾಗದಲ್ಲಿ ಅಮರಯ್ಯ ಹಾಗೂ ನೀಲಮ್ಮ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗ­ದಲ್ಲಿ ಚಾಂಪಿಯನ್‌ ಆಗಿ ಹೊರ­ಹೊಮ್ಮಿ­ದರು.ಕ್ರಿಕೆಟ್‌ನಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ ತಳಕೇರಿ ಮತ್ತು ತಂಡ ಪ್ರಥಮ ಬಹು­ಮಾನ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಮತ್ತು ತಂಡ ದ್ವಿತೀಯ ಬಹುಮಾನ ಪಡೆದವು.ಪ್ರಶಸ್ತಿ ಪ್ರದಾನ ಮಾಡಿ ಮಾತನಾ­ಡಿದ ಈಶಾನ್ಯ ವಲಯ ಐಜಿಪಿ ಮಹಮ್ಮದ್ ವಜೀರ್ ಅಹಮ್ಮದ್, ‘ಪ್ರತಿ ವರ್ಷ ಕ್ರೀಡಾಕೂಟ ಆಯೋಜಿ­ಸಲಾಗುತ್ತಿದ್ದು, ಡಿಎಆರ್ ಸಮಗ್ರ ಚಾಂಪಿಯನ್ ಆಗಿ ಹೊರಹೊ-­ಮ್ಮು­ತ್ತಿದೆ. ಬೇರೆಯವರೂ ಪ್ರಶಸ್ತಿ ಪಡೆ­ಯಲು ಪ್ರಯತ್ನಿಸಬೇಕುಎಂದು ಹೇಳಿ­ದರು.  ಜಿಲ್ಲಾಧಿಕಾರಿ ಡಾ.ಎನ್.ವಿ.­ಪ್ರಸಾದ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)