ಬುಧವಾರ, ಜುಲೈ 28, 2021
29 °C

ಗುಲ್ಬರ್ಗ: ಹೆಚ್ಚುವರಿ ಬಸ್‌ ಸೇವೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಪ್ರಯಾಣಿಕರಿಗೆ ಹೆಚ್ಚಿನ ಹಾಗೂ ಉತ್ತಮ ಸಾರಿಗೆ ಸೌಕರ್ಯ ಒದಗಿಸುವ ದೃಷ್ಟಿಯಿಂದ  ಈಗಾಗಲೇ ಸುಮಾರು 200 ಹೊಸ ವಾಹನಗಳನ್ನು ಖರೀದಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಹಾಗೂ ಮೇ ತಿಂಗಳೊಳಗಾಗಿ ಇನ್ನೂ 100 ಹೊಸ ವಾಹನಗಳೊಂದಿಗೆ ಹೆಚ್ಚಿನ ಮಾರ್ಗಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.ಗುಲ್ಬರ್ಗದಿಂದ  ಹೈದರಾಬಾದ್‌, ಪುಣೆ, ನಾಸಿಕ್‌, ಧರ್ಮಸ್ಥಳ, ಮುಂಬಯಿ ಮತ್ತು ಬೆಂಗಳೂರು, ಆಳಂದದಿಂದ ಹೈದರಾಬಾದ್‌, ಚಿಂಚೋಳಿಯಿಂದ  ಬೆಂಗಳೂರು, ಜೇವರ್ಗಿಯಿಂದ ಮುಂಬಯಿ, ಚಿತ್ತಾಪುರದಿಂದ  ಹೈದರಾಬಾದ್‌ ಮತ್ತು ಹುಬ್ಬಳ್ಳಿ, ಕಾಳಗಿಯಿಂದ ಪುಣೆ, ಲಾತೂರ ಮತ್ತು ಹೊಸಪೇಟೆಗೆ ಹೊಸ ಬಸ್‌ ಸೇವೆ ಆರಂಭಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.ಬೀದರ್‌ನಿಂದ  ಮುಂಬಯಿ, ಬಳ್ಳಾರಿ ಮತ್ತು ಪರಳಿ, ಹುಮನಾಬಾದ್‌ನಿಂದ ಹೈದರಾಬಾದ್‌, ಹುಬ್ಬಳ್ಳಿ ಮತ್ತು ಗುಲ್ಬರ್ಗ, ಭಾಲ್ಕಿಯಿಂದ ಪುಣೆ ಮತ್ತು ಬೆಂಗಳೂರು, ಬಸವಕಲ್ಯಾಣದಿಂದ ಹುಬ್ಬಳ್ಳಿ, ಹೈದರಾಬಾದ್‌, ಬೆಂಗಳೂರು ಮತ್ತು ಬೀದರ್‌, ಔರಾದ್‌ನಿಂದ ಬೆಂಗಳೂರು ಮತ್ತುಗುಲ್ಬರ್ಗಕ್ಕೆ ಹೊಸ ಬಸ್‌ ಆರಂಭವಾಗಿದೆ.ಯಾದಗಿರಿಯಿಂದ ಬೆಂಗಳೂರು ಮತ್ತು ಹೈದರಾಬಾದ್‌, ಶಹಾಪುರದಿಂದ ಮೀರಜ್‌, ಬೆಂಗಳೂರು, ಬಳ್ಳಾರಿ ಮತ್ತು ಬೆಳಗಾವಿ, ಸುರಪುರದಿಂದ ಬೆಂಗಳೂರು, ಗುರುಮಠಕಲ್‌ದಿಂದ ಬೆಂಗಳೂರು, ಹೈದ್ರಾಬಾದ್‌ ಮತ್ತು ಹುಬ್ಬಳ್ಳಿ, ಸೇಡಂದಿಂದ  ದಾವಣಗೆರೆ.ರಾಯಚೂರಿನಿಂದ ಧಾರವಾಡ, ಬೆಂಗಳೂರು, ಕೊಪ್ಪಳ, ಬಳ್ಳಾರಿ ಮತ್ತು ವಾಸ್ಕೋ, ಲಿಂಗಸೂಗೂರಿನಿಂದ ಬೆಂಗಳೂರು, ಸಜ್ಜಲಗುಡ್ಡದಿಂದ ಬೆಂಗಳೂರು, ಸಿಂಧನೂರದಿಂದ ಬೆಂಗಳೂರು ಮತ್ತು ದಾವಣಗೇರೆ, ಮಾನ್ವಿಯಿಂದ ಬೆಂಗಳೂರು, ದೇವದುರ್ಗದಿಂದ ಬೆಂಗಳೂರು, ಮಸ್ಕಿಯಿಂದ ಬೆಂಗಳೂರು ನಗರಕ್ಕೆ ಹೊಸ ಬಸ್‌ ಸೇವೆ ಆರಂಭವಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಕೊಪ್ಪಳದಿಂದ ಬೆಂಗಳೂರು ಮತ್ತು ಹೈದರಾಬಾದ್‌, ಗಂಗಾವತಿಯಿಂದ ಹೈದರಾಬಾದ್‌ ಮತ್ತು ಬೆಂಗಳೂರು, ಯಲಬುರ್ಗಾದಿಂದ ಬೆಂಗಳೂರು, ಕುಷ್ಟಗಿಯಿಂದ ಬೆಂಗಳೂರು ಮತ್ತು ಧರ್ಮಸ್ಥಳ.ಬಳ್ಳಾರಿಯಿಂದ ಮಡಿಕೇರಿ, ತಿರುಪತಿ, ಪುಣೆ ಮತ್ತು ಕೊಲ್ಲಾಪುರ, ಸಿರಗುಪ್ಪಾದಿಂದ ಬೆಂಗಳೂರು, ಹೊಸಪೇಟೆಯಿಂದ ಬಳ್ಳಾರಿ, ಸಂಡೂರದಿಂದ ಬೆಳಗಾವಿ ಮತ್ತು ಹೊಸಪೇಟೆ, ಕೂಡ್ಲಿಗಿಯಿಂದ ದೇವದುರ್ಗ.ವಿಜಾಪುರದಿಂದ ಬೆಂಗಳೂರು, ಹೈದರಾಬಾದ್‌, ಔರಂಗಾಬಾದ್‌, ಸಾತಾರಾ ಮತ್ತು ಮಂಗಳೂರು, ಇಂಡಿಯಿಂದ ದಾವಣಗೆರೆ ಮತ್ತು ಪುಣೆ, ಸಿಂದಗಿಯಿಂದ ಶ್ರೀಶೈಲಂ, ಮುಂಬಯಿ, ವಿಜಾಪುರ ಮತ್ತು ಸಾಂಗ್ಲಿ, ಮುದ್ದೆಬಿಹಾಳದಿಂದ ಬೆಂಗಳೂರು ಮತ್ತು ಬಾಗಲಕೋಟ, ತಾಳಿಕೋಟೆಯಿಂದ ಬೆಂಗಳೂರು, ನಾಂದೇಡ ಮತ್ತು ಮುಂಬಯಿ, ಬಸವನ ಬಾಗೇವಾಡಿಯಿಂದ ಬೆಂಗಳೂರು ಮತ್ತು ಹುಬ್ಬಳ್ಳಿಗೆ ಸೇವೆ ಆರಂಭಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಂಕರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.