ಬುಧವಾರ, ಆಗಸ್ಟ್ 4, 2021
27 °C

ನದಿಗೆ ಕಾರ್ಖಾನೆ ಕಲ್ಮಶ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ತಾಲ್ಲೂಕಿನ ಹಾವಳಗಿ ಗ್ರಾಮದ ಹತ್ತಿರ ನಿರ್ಮಾಣವಾಗಿರುವ ಸಕ್ಕರೆ ಕಾರ್ಖಾನೆಯು  ದಿನಕ್ಕೆ 7 ಸಾವಿರ ಟನ್‌ ಕಬ್ಬು ನುರಿಯುತ್ತಿದ್ದು ಲಕ್ಷಾಂತರ ಗ್ಯಾಲನ್‌ ಕಲ್ಮಶ ನೀರು ಭೀಮಾ ನದಿಗೆ ಸೇರುತ್ತಿದ್ದು, ಇದರಿಂದ ಭೀಮಾ ನದಿ ಸಂಪೂರ್ಣ ವಿಷಪೂರಿತವಾಗಿದೆ ಎಂದು ಜನರು ಆರೋಪಿಸಿದ್ದಾರೆ.ಕಾರ್ಖಾನೆ ಆರಂಭವಾಗಿ ನಾಲ್ಕು ವರ್ಷ ಕಳೆಯುತ್ತಾ ಬಂದಿವೆ. ಪ್ರತಿ ವರ್ಷ ಸುಮಾರು ಎಂಟು ತಿಂಗಳು ಕಲ್ಮಶವಾದ ನೀರು ಭೀಮಾ ನದಿ ಸೇರುತ್ತದೆ. ಕಾರ್ಖಾನೆಯಿಂದ ನೇರವಾಗಿ ಕಾಲುವೆ ಕೊರೆದು ಘತ್ತರ್ಗಿ ಹತ್ತಿರ ಭೀಮಾ ನದಿಗೆ ಬಿಡಲಾಗಿದೆ. ದಿನಾಲು ಸಣ್ಣ ಕಾಲುವೆ ಹರಿದಂತೆ ಕಲ್ಮಶ ನೀರು ಹರಿದು ಹೋಗಿ ನದಿಗೆ ಸೇರುತ್ತದೆ.ಘತ್ತರ್ಗಿ ಮತ್ತು ದೇವಲಗಾಣಗಾಪೂರ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎರಡು ಬ್ಯಾರೇಜ್‌ಗಳ ಗೇಟ್‌ ಅಳವಡಿಸಲಾಗಿದೆ. ಹೀಗಾಗಿ ನೀರು ಹರಿಯದೆ ಸಕ್ಕರೆ ಕಾರ್ಖಾನೆಯ ಸಕ್ಕರೆ ಕಾರ್ಖಾನೆಯ ಕಲ್ಮಶ ನೀರು ಒಂದೆಡೆ ಸಂಗ್ರಹವಾಗುತ್ತಿದೆ. ಅದರಲ್ಲಿ ದೇವಲಗಾಣಗಾಪೂರದ ಹತ್ತಿರ ಅಮರ್ಜಾ ಭೀಮಾ ನದಿ ಎರಡು ಕೂಡಿದ್ದು, ಅಲ್ಲಿ ಸಂಗಮ ಇರುವುದರಿಂದ ಸಾವಿರಾರು ಯಾತ್ರಿಕರು ದಿನಾಲು ಕಲ್ಮಶ ನೀರಲ್ಲೆ ಸ್ನಾನ ಮಾಡುತ್ತಿದ್ದಾರೆ. ಇದರಿಂದ ಚರ್ಮ ರೋಗ ಬರುವ ಸಾಧ್ಯತೆ ಇದೆ ಎಂದು ಜನರು ಹೇಳುತ್ತಾರೆ.ಘತ್ತರ್ಗಿ ಭಾಗದ ಕೆಳಗೆ ಸುಮಾರು 20-30 ಹಳ್ಳಿಗಳು ಕುಡಿಯುವ ನೀರಿಗಾಗಿ ಭೀಮಾ ನದಿಯನ್ನೆ ಅವಲಂಬಿಸಿವೆ. ಹೀಗಾಗಿ ಕಾರ್ಖಾನೆ ಹೊರಬಿಡುವ ಕಲ್ಮಶ ನೀರು ಲಕ್ಷಾಂತರ ಜನರು ಕುಡಿಯಲು ಇದೇ ನೀರನ್ನು  ಉಪಯೋಗ ಮಾಡುತ್ತಿದ್ದಾರೆ. ರೇಣುಕಾ ಶುಗರ್ಸ್‌ ಆಡಳಿತ ಮಂಡಳಿಯವರು ಕಾರ್ಖಾನೆ ಹೊರಬಿಡುವ ಕಲ್ಮಶ ನೀರನ್ನ ಒಂದು ಕಡೆ ಸಂಗ್ರಹಿಸಿ ಸಂಸ್ಕರಿಸಿ ಭೀಮಾ ನದಿಗೆ ಬಿಡಬೇಕೆಂದು ಆ ಭಾಗದ ಜನರು ಹೇಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.