ಗುರುವಾರ , ಜುಲೈ 29, 2021
23 °C

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೇಂದ್ರ ಸರ್ಕಾರ ತನ್ನ ಭ್ರಷ್ಟಾಚಾರದ ನೀತಿಯಿಂದ ದೇಶವನ್ನು ಅಧೋಗತಿಗೆ ತಳ್ಳುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ಕಾರ್ಯಕರ್ತರು ಶನಿವಾರ ನಗರದ ಜಗತ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರದ ಭ್ರಷ್ಟಾಚಾರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನ ಮುಟ್ಟಿವೆ. ಇದರಿಂದ ಸಾಮಾನ್ಯ ಪ್ರಜೆಗಳು ನಿಶ್ಚಿಂತೆಯಿಂದ ಬಾಳಲಾರದಂಥ ವಾತಾವರಣ ನಿರ್ಮಾಣವಾಗಿದೆ ಎಂದು ಅದು ಆಪಾದಿಸಿದೆ.ಕಾರ್ಗಿಲ್‌ನಲ್ಲಿ ಹುತಾತ್ಮರಾದವರ ಕುಟುಂಬಕ್ಕೆ ನಿರ್ಮಿಸಿದ ಮನೆಗಳಲ್ಲಿಯೂ ಅವ್ಯವಹಾರ ನಡೆಸಿದೆ.ಅಲ್ಲದೇ ಸಂಸದ ಸುರೇಶ ಕಲ್ಮಾಡಿ ನೇತೃತ್ವದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿಯೂ ಬಹುಕೋಟಿ ಹಗರಣ ನಡೆದಿದೆ. ಇಂಥ ಅವ್ಯವಸ್ಥೆಯಿಂದಾಗಿ ದೇಶದಲ್ಲಿ ಬಡವರು ಮತ್ತಷ್ಟು ಬಡವರಾಗಿ ಬಾಳುವಂತಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಕಳೆದ 5 ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆ 3 ಪಟ್ಟು ಹೆಚ್ಚಾಗಿದೆ. ದೇಶದಲ್ಲಿ ಸಕ್ಕರೆ, ಗೋಧಿ ದಾಸ್ತಾನು ಸಾಕಷ್ಟು ಇದ್ದರೂ ವಿದೇಶಗಳಿಂದ ತರಿಸಿಕೊಂಡು ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟು ಮಾಡಿದ್ದಾರೆ.  ಈ ಕಾರಣಗಳಿಂದ ಯುಪಿಎ ಸರ್ಕಾರದ ಆಡಳಿತ ಜನಸಾಮಾನ್ಯರ ಬದುಕನ್ನು ಹಾಳು ಮಾಡುತ್ತಿದೆ.ಇದರ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತದೆ ಎಂದು ಮೋರ್ಚಾದ ಸದಸ್ಯ ಸಾವಿತ್ರಿ ಕುಳಗೇರಿ, ನಗರ ಘಟಕದ ಅಧ್ಯಕ್ಷೆ ಅನಿತಾ ಸುದ್ದಿವಾಲು, ಶಿವಾನಿ, ಪದ್ಮಜಾರೆಡ್ಡಿ, ಶ್ರೀಲಕ್ಷ್ಮಿ ಕುಲಕರ್ಣಿ ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.