ಪರಿಸರ ರಕ್ಷಣೆ ಎಲ್ಲರ ಹೊಣೆ: ನಿಷ್ಠಿ

7

ಪರಿಸರ ರಕ್ಷಣೆ ಎಲ್ಲರ ಹೊಣೆ: ನಿಷ್ಠಿ

Published:
Updated:

ಗುಲ್ಬರ್ಗ: ‘ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಸರ್ಕಾರದ ಹೊಣೆ ಎಂದು ನುಣುಚಿಕೊಳ್ಳುವ ಬದಲಿ   ಹೊಣೆಗಾರಿಕೆ ಅರಿತು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು’ ಎಂದು ಡಾ.ಮಲ್ಲಿಕಾರ್ಜುನ  ನಿಷ್ಠಿ ಹೇಳಿದರು.ನಗರದ ಮೌಂಟಮರ್ಸಿ ಪಿಯು ಕಾಲೇಜಿನಲ್ಲಿ ಈಚೆಗೆ ಜೆ.ಸಿ.ಬೋಸ್‌ ಇಕೋ ಕ್ಲಬ್‌ ವತಿಯಿಂದ ಹಮ್ಮಿಕೊಂಡಿದ್ದ ‘ಹಸಿರು ಪಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಎ.ಬಿ.ಬಿರಾದಾರ ಮಾತನಾಡಿ, ಮಾನವನ ಜೀವನ ನಿಸರ್ಗ ಸಹಜವಿರಬೇಕು ಹೊರತು ನಿಸರ್ಗದ ವಿರುದ್ಧ ಇರಬಾರದು ಎಂದರು.ಪ್ರಾಚಾರ್ಯ ಗುರುಶಾಂತಪ್ಪ ಅಕ್ಕಾ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಶಂಕರಸಿಂಗ್‌ ಶರಣಪ್ಪ ಮಳ್ಳಿ ಸಂಸ್ಥೆ ಸದಸ್ಯ ಮೌಸಮ್‌ ಗೋಟರಿ,  ಇಕೋ ಕ್ಲಬ್‌ ಸಂಯೋಜಕಿ ರೂಪಾ ಕೆರಳ್ಳಿ, ಸಿಬ್ಬಂದಿ ಇದ್ದರು.ಇದೇ ಸಂದರ್ಭದಲ್ಲಿ ಇಕೋ ಕ್ಲಬ್‌ ವತಿಯಿಂದ ವಿದ್ಯಾರ್ಥಿಗಳಿಗಾಗಿ ಪರಿಸರ ಸಂಬಂಧಿ ವಿಚಾರಗಳ ಕುರಿತಂತೆ ಆಯೋಜಿಲಾಗಿದ್ದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry