‘ಸಮಾನತೆಗೆ ವಚನಗಳ ಮೂಲಕ ಹೋರಾಟ’

7

‘ಸಮಾನತೆಗೆ ವಚನಗಳ ಮೂಲಕ ಹೋರಾಟ’

Published:
Updated:

ಮಹಾಲಿಂಗಪುರ:  ‘ಮನುಕುಲದ ಉದ್ಧಾರ­ಕ್ಕಾಗಿ ಸಾಮಾಜಿಕ ಕ್ರಾಂತಿ ಮಾಡಿದ ಶಿವಶರಣರು, ಮನು­ಷ್ಯ­ರನ್ನು ಮನುಷ್ಯರನ್ನಾಗಿ ಕಾಣು­ವಂತೆ ಹೋರಾಟ ಮಾಡಿದರು. ಪ್ರಜಾ­ಪ್ರಭುತ್ವಕ್ಕೂ ಮುಂಚೆ ಎಲ್ಲ ಸಮು­ದಾಯ­ಗಳಲ್ಲೂ ಇದ್ದ ಧಾರ್ಮಿಕ ತಿಕ್ಕಾಟ, ಸಂಘರ್ಷಗಳಿಗೆ ಸಾಕ್ಷಿ­ಯಾದ ವಚನಕಾರರು ಸಮಾ­ನ­ತೆಯ ಹೋರಾಟವನ್ನು ವಚನಗಳ ಮೂಲಕ ಮಾಡಿದರು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಎರಡು ದಿನಗಳ ವಚನ ಸಂಗೀತೋತ್ಸವ ಕಾರ್ಯ­ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ­­ನಾಡಿ­ದರು. ಹನ್ನೆರಡನೇ ಶತ­ಮಾನದಲ್ಲಿ ಕಾಯಕದೊಂದಿಗೆ ಜಾತಿ ಅಂಟಿಕೊಂಡಿತ್ತು. ಇದರಿಂದ ಜಾತಿ ಸಂಘರ್ಷ­ವುಂಟಾಗಿ, ಸಾಮಾಜಿಕ ಬೆಳ­ವಣಿಗೆ ಕುಂಠಿತಗೊಂಡಿತ್ತು. ವಚನ ಸಾಹಿತ್ಯದ ನಿಜವಾದ ಅಧ್ಯ­ಯನದಿಂದ ಜಾತಿ ವ್ಯವಸ್ಥೆಯ ನಿರ್ಮೂ­ಲನೆ ಸಾಧ್ಯ’ ಎಂದರು.‘ಸಂಗೀತ, ನಾಟಕಗಳ ಮೂಲಕ ವಚನ ಸಾಹಿತ್ಯವನ್ನು ಹೆಚ್ಚು ಪ್ರಚುರಗೊಳಿಸಿ ಜನಸಾಮಾನ್ಯರಿಗೆ ವಚನಗಳನ್ನು ತಲುಪಿಸಿದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ’ ಎಂದು ವಚನ ಸಂಗೀತೋತ್ಸವಕ್ಕೆ ಚಾಲನೆ ನೀಡಿದ ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.‘ಸಂಸ್ಕೃತವನ್ನು ದೇವಭಾಷೆ ಎಂದು ತಿಳಿದುಕೊಂಡಿದ್ದ ಕಾಲಘಟ್ಟದಲ್ಲಿ ಶಿವಶರಣರು ಜನರಿಗೆ ತಿಳಿಯುವ ಭಾಷೆಯಲ್ಲಿ ವಚನಗಳನ್ನು ರಚಿಸಿ, ಕನ್ನಡವನ್ನೇ ದೇವಭಾಷೆಯನ್ನಾಗಿ ಮಾಡಿದರು. ಹಾಗಾಗಿ ವಚನ­ಗಳಷ್ಟು ಜನಮಾನಸದಲ್ಲಿ ಪ್ರಭಾವ ಬೀರಿದ ಸಾಹಿತ್ಯ ಮತ್ತೊಂದಿಲ್ಲ’ ಎಂದು ಪ್ರವಚನಕಾರ ಇಬ್ರಾಹಿಂ ಸುತಾರ ಅಭಿಪ್ರಾಯಪಟ್ಟರು.ಸಾಹಿತಿ, ವಿಮರ್ಶಕ ಸಿದ್ಧರಾಜ ಪೂಜಾರಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಪುರಸಭೆಯ ಅಧ್ಯಕ್ಷ ಅರ್ಜುನಗೌಡ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry