‘ಗಂಡು ಮಕ್ಕಳನ್ನೂ ಕಾಳಜಿಯಿಂದ ಬೆಳೆಸಿ’

7

‘ಗಂಡು ಮಕ್ಕಳನ್ನೂ ಕಾಳಜಿಯಿಂದ ಬೆಳೆಸಿ’

Published:
Updated:

ಗುಲ್ಬರ್ಗ: ಹೆಣ್ಣು ಮಗು ಹುಟ್ಟಿದಾಗ ಅದರ ಸುರಕ್ಷತೆ ಹಾಗೂ ಶಿಕ್ಷಣದ ಬಗ್ಗೆ ಪೋಷಕರು ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿಯಲ್ಲಿ ಗಂಡು ಮಗುವಿನ ಶಿಕ್ಷಣ, ಸಂಸ್ಕಾರದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು ಎಂದು ವಾಣಿಜ್ಯ ತೆರಿಗಳ ಇಲಾಖೆಯ ಸಹಾಯಕ ಆಯುಕ್ತೆ ಮೀರಾ ಪಂಡಿತ್ ಹೇಳಿದರು.ನಗರದ  ಕೋಠಾರಿ ಭವನದಲ್ಲಿ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ವರ್ಷಾಚರಣೆ ಸಮಿತಿ ಗುರುವಾರ ಆಯೋಜಿಸಿದ್ದ ಶಕ್ತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಗಂಡು ಮಕ್ಕಳು ಸಂಸ್ಕಾರವಂತರಾಗಿ ಬೆಳೆದರೆ ಹೆಣ್ಣು ಮಕ್ಕಳಿಗೆ ಸುರಕ್ಷತೆ ಹಾಗೂ ಗೌರವ ಹೆಚ್ಚಾಗುತ್ತದೆ. ಗಂಡು ಮಕ್ಕಳ ಬೆಳವಣಿಗೆ ನಿರ್ಲಕ್ಷಿ ಸಿದರೆ, ಆತ ಪರಿಪೂರ್ಣ ಮತ್ತು ಮಾದರಿಯ ವ್ಯಕ್ತಿಯಾಗಿ ಬೆಳೆಯುವು ದಿಲ್ಲ. ಚಾರಿತ್ರ್ಯ ಹೀನರಾದರೆ ಸಮಾಜಕ್ಕೆ ಮಾರಕವಾಗಿ ಪರಿಣಮಿಸು ತ್ತಾರೆ ಎಂದು ಅಭಿಪ್ರಾಯಪಟ್ಟರು.ಮಾನವೀಯ ಮೌಲ್ಯ, ಸಹೋದರತೆ, ಪರಸ್ತ್ರೀಯರನ್ನು ಗೌರವದಿಂದ ಕಾಣುವಂತ ಮನೋಭಾವನೆಗಳನ್ನು ಯುವ ಸಮುದಾಯ ಬೆಳೆಸಿಕೊಳ್ಳ ಬೇಕು. ಈ ಗುಣಗಳು ಬೆಳೆಯುವುದಕ್ಕೆ, ಮನೆಗಳಲ್ಲಿ ತಾಯಿಯರ ಪಾತ್ರ ಅತತೀ ಮುಖ್ಯವಾಗಿದೆ. ತಂದೆ ಕೂಡಾ ಗಂಡು ಮಕ್ಕಳಿಗೆ ನೈತಿಕತೆ ಪಾಠ ಹೇಳಿಕೊಡಬೇಕು ಎಂದು ತಿಳಿಸಿದರು.ರಾಷ್ಟ್ರ ಸೇವಿಕಾ ಸಮಿತಿ ಉತ್ತರ ಕರ್ನಾಟಕ ಪ್ರಾಂತದ ಕಾರ್ಯನಿರ್ವಾ ಹಕಿ ವೇದಾ ಕುಲಕರ್ಣಿ ಮಾತನಾಡಿ, ಸೃಷ್ಟಿ, ಸ್ಥಿತಿ ಮತ್ತು  ಲಯ ಇವಲ್ಲವೂ ಮಹಿಳಾ ಶಕ್ತಿಯಾಗಿವೆ. ಉತ್ತರ ದಾಯಿ ಆಗಿರುವ ಇವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿನ ಅಂಕುಡೊಂಕು ಗಳನ್ನು ತಿದ್ದಬೇಕು ಎಂದರು.ಸಮಿತಿ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಸಂಯೋಜಕಿ ವಾಸುಕಿ ಹೇರೂರ ಮತ್ತಿತರರು ವೇದಿಕೆಯಲ್ಲಿದ್ದರು. ಉಷಾ ಶರ್ಮಾ ಪಾಟೀಲ್, ಶಶಿಕಲಾ ಜಡೆ, ಶಾಂತಾ ಪಸ್ತಾಪುರ, ವಿಜಯ ಲಕ್ಷ್ಮೀ ಕೋಸಗಿ, ಶಾಂತಿ ದೇಸಾಯಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry