ವಿವಿ ವೆಬ್‌ಸೈಟ್; ಅಪ್‌ಡೇಟ್ ಯಾವಾಗ?

7
ನಿವೃತ್ತಿಯಾಗಿ ಒಂದೂವರೆ ವರ್ಷ; ಬದಲಾಗಿಲ್ಲ ಹೆಸರು!

ವಿವಿ ವೆಬ್‌ಸೈಟ್; ಅಪ್‌ಡೇಟ್ ಯಾವಾಗ?

Published:
Updated:

ಗುಲ್ಬರ್ಗ:  ಇದು ಮಾಹಿತಿ ತಂತ್ರಜ್ಞಾನ ಮತ್ತು ಸ್ಮಾರ್ಟ್ ಫೋನ್‌ಗಳ ಕಾಲ. ಬೆರಳ ತುದಿಯಲ್ಲೇ ನಮಗೆ ಬೇಕಾದ ಮಾಹಿತಿ ಪಡೆಯಬಹುದು. ಹಾಗಂತ, ಗುಲ್ಬರ್ಗ ವಿಶ್ವವಿದ್ಯಾಲಯದ ವೆಬ್‌­ಸೈಟ್‌ಗೆ ಭೇಟಿ ನೀಡಿದರೆ ಬಹುತೇಕ ಹಳೆಯ ಮಾಹಿತಿಯೇ ಪರದೆಯ ಮೇಲೆ ಕಾಣಸಿಗುತ್ತದೆ!ಮುಖಪುಟದಲ್ಲಿ ಬ್ಲಿಂಕ್ ಆಗುವ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ವೇಳಾಪಟ್ಟಿ, ಕ್ರೀಡೆಯ ಕ್ಯಾಲೆಂಡರ್, ವಿ.ವಿಯಲ್ಲಿ ನಡೆಯುವ ಸಮ್ಮೇಳನ, ಸಮಾರಂಭದ ಆಹ್ವಾನ ಪತ್ರಿಕೆಗಳು, ಅತಿಥಿ ಉಪನ್ಯಾಸಕರ ಖಾಲಿ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿ ಅಪ್‌ಡೇಟ್ ಆಗಿದೆ. ಆದರೆ, ವಿಭಾಗ­ವಾರು ಮಾಹಿತಿ ಮಾತ್ರ ಹಳೆಯದ್ದೇ ಇದೆ. ಇದರಿಂದಾಗಿ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ತಕ್ಷಣ ಮಾಹಿತಿ ಬೇಕಾದರೆ ಪರದಾಡಬೇಕಾಗಿದೆ.ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಬದಲಾಗಿದ್ದಾರೆ. ಈ ಮೊದಲಿದ್ದ ಡಾ.ವಾಸುದೇವ ಸೇಡಂ ಬದಲು, ಪ್ರೊ.ಛಾಯಾ ದೇಗಾಂವಕರ್ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ, ಮಹಿಳಾ ಅಧ್ಯಯನ ವಿಭಾಗಕ್ಕೂ ಇವರೇ ಮುಖ್ಯಸ್ಥರಾಗಿದ್ದಾರೆ. ಆದರೆ, ವೆಬ್‌ಸೈಟ್‌ನಲ್ಲಿ ಮಾತ್ರ ಇನ್ನೂ ಹೆಸರು ಬದಲಾಗಿಲ್ಲ. ಈ ಹಿಂದೆ ಇದ್ದ ಮುಖ್ಯಸ್ಥರ ಹೆಸರನ್ನೇ ತೋರಿಸಲಾಗಿದೆ.ಇನ್ನು ಎನ್ವಿರಾನ್‌ಮೆಂಟ್ ಸೈನ್ಸ್ (ಪರಿಸರ ವಿಜ್ಞಾನ) ವಿಭಾಗದ ಮುಖ್ಯಸ್ಥರು ನಿವೃತ್ತರಾಗಿ ಒಂದೂವರೆ ವರ್ಷವಾಗಿದೆ (2012 ಮೇ). ಆದಾಗ್ಯೂ, ವಿ.ವಿ ವೆಬ್‌ಸೈಟ್‌ ಪ್ರಕಾರ ಈಗಲೂ ಅವರೇ ಮುಖ್ಯಸ್ಥರಾಗಿದ್ದಾರೆ. ವೆಬ್‌ಸೈಟ್‌ನಲ್ಲಿ ಅವರ ಮೊಬೈಲ್ ನಂಬರ್ ಹಾಕಲಾಗಿದ್ದು, ಅದೆಷ್ಟೋ ಜನ ಈಗಲೂ ಕರೆ ಮಾಡಿ ಮಾತನಾ-­ಡುತ್ತಿದ್ದಾರೆ. ‘ನಾನು ನಿವೃತ್ತಿಯಾಗಿ ಬೆಂಗಳೂರಿನಲ್ಲಿ ನೆಮ್ಮದಿಯ ಜೀವನ ಕಳೆಯುತ್ತಿದ್ದೇನೆ. ಬಹುಶಃ ವೆಬ್‌ಸೈಟ್ ಅಪ್‌ಡೇಟ್‌ ಆದಂತೆ ಕಾಣುವುದಿಲ್ಲ’ ಎಂದು ಸಂಕೋಚದಿಂದಲೇ ನಿವೃತ್ತ ಪ್ರಾಧ್ಯಾಪಕರು ಬೇಸರ ವ್ಯಕ್ತಪಡಿಸು­ತ್ತಾರೆ.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ ಆರಂಭವಾಗಿ 6 ವರ್ಷಗಳಾದರೂ ಈ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿಯೇ ಇಲ್ಲ. ಪತ್ರಿಕೋದ್ಯಮ ಕೋರ್ಸ್‌ ಅನ್ನು ಗುಲ್ಬರ್ಗ ವಿ.ವಿಯಲ್ಲಿ ಆರಂಭಿಸಲಾಗಿದೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದು­ಕೊಳ್ಳ­ಬೇಕು ಎಂದರೆ ವಿ.ವಿಗೆ ಭೇಟಿ ನೀಡಬೇಕಾಗಿದೆ.‘ವಿ.ವಿಯಲ್ಲಿ ನಡೆಯುವ ವಿದ್ಯಮಾನ­ಗಳು, ವಿಭಾಗದಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಮುಖ್ಯಸ್ಥರ ಬದಲಾವಣೆಯನ್ನು ಆಯಾ ವಿಭಾಗದ ಮುಖ್ಯಸ್ಥರು ನಮ್ಮ ಗಮನಕ್ಕೆ ತಂದರೆ ಖಂಡಿತ ವೆಬ್‌ಸೈಟ್‌ ಅನ್ನು ಅಪ್‌ಡೇಟ್‌ ಮಾಡುತ್ತೇವೆ. ಕುಲಸಚಿವರ ಜತೆ ಈ ಬಗ್ಗೆ ಚರ್ಚಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಅಪ್‌ಡೇಟ್ ಮಾಡಲಾಗು­ವುದು’ ಎಂದು ಕೇಂದ್ರೀಯ ಶೈಕ್ಷಣಿಕ ಕಂಪ್ಯೂಟರ್ ಕೇಂದ್ರದ ಮುಖ್ಯಸ್ಥ ಡಾ.ಡಾರ್ಲಿ ಎಸ್.ಪಥಾತಿಲ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry