ನಾಳೆಯಿಂದ ಶರಣ ಸಂಗಮ

7
ಮರಾಠಿಗರಿಗೆ ಪ್ರತ್ಯೇಕ ಅನುಭಾವ ಗೋಷ್ಠಿ

ನಾಳೆಯಿಂದ ಶರಣ ಸಂಗಮ

Published:
Updated:

ಗುಲ್ಬರ್ಗ: ಜನವರಿ 10 ರಿಂದ 12ರ ವರೆಗೆ ವಿಶ್ವ ಲಿಂಗಾಯತ ಮಹಾಸಭೆ ವತಿಯಿಂದ ನಾಲ್ಕನೇ ಶರಣ ಸಂಗಮ–2014 ಕಾರ್ಯಕ್ರಮವನ್ನು ನಗರದ ಕೋಠಾರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಲಿಂಗಾಯಿತ ಮಹಾಸಭೆ ಅಧ್ಯಕ್ಷ ಸಂಜಯ ಮಾಕಲ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ 10ರಂದು ಶರಣ ಸಂಗಮ ಉದ್ಘಾಟನಾ ಕಾರ್ಯಕ್ರಮದ ಜರುಗುವುದು. ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿರಕ್ತ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು.ಬಸವ ಕೇಂದ್ರದ ಅಧ್ಯಕ್ಷ ಶಿವಶರಣಪ್ಪ ಕಲಬುರ್ಗಿ ಅಧ್ಯಕ್ಷತೆ ವಹಿಸುವರು. ಡಾ.ಸಿದ್ದಣ್ಣ ಲಂಗೋಟಿ ಅನುಭಾವ ನೀಡುವರು. ಜ. 11 ಮತ್ತು 12 ರಂದು ವಿವಿಧ ಅನುಭಾವ ಗೋಷ್ಠಿಗಳು ನಡೆಯಲಿವೆ ಎಂದರು.ಪ್ರತ್ಯೇಕ ಅನುಭಾವ ಗೋಷ್ಠಿ: ಮಹಾರಾಷ್ಟ್ರದ ಸಾಂಗ್ಲಿ, ಮಿರಜ್‌, ಸೊಲ್ಲಾಪುರ, ಲಾತೂರಗಳಿಂದ ಪ್ರತಿ ವರ್ಷ ನೂರಾರು ಶರಣರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ಅನುಭಾವ ಗೋಷ್ಠಿಗಳು ಕನ್ನಡ ಭಾಷೆಯಲ್ಲಿ ನಡೆಯುತ್ತಿರುವುದರಿಂದ ಅರ್ಥೈಯಿಸಿಕೊಳ್ಳಲಾಗುತ್ತಿಲ್ಲ ಎಂದು ಮರಾಠಿ ಶರಣರು ತಿಳಿಸಿದ್ದಾರೆ.ಆ ಹಿನ್ನೆಲೆಯಲ್ಲಿ, ಶರಣ ತತ್ವಗಳು ಅವರಿಗೆ ಮನಮುಟ್ಟುವ ಉದ್ದೇಶದಿಂದ ಮರಾಠಿ ಭಾಷೆಯಲ್ಲಿ ಪ್ರತ್ಯೇಕ ಸಭಾಂಗಣದಲ್ಲಿ ಅನುಭಾವ ಗೋಷ್ಠಿಯನ್ನು ನಡೆಸಲಾಗುತ್ತಿದೆ.  ಮರಾಠ ಸಮ್ಮೇಳನದ ಅಧ್ಯಕ್ಷತೆಯನ್ನು ಎಐಸಿಸಿ ಸದಸ್ಯೆ ಸರಳಾತಾಯಿ ಪಾಟೀಲ ವಹಿಸುವರು. ಮಾಜಿ ಶಾಸಕ ವಿಶ್ವನಾಥ ಕಾರ್ಯಕ್ರಮ ಉದ್ಘಾಟಿಸುವರು. ಮಹಾರಾಷ್ಟ್ರ ಲಿಂಗಾಯಿತ ಸೇವಾ ಸಂಘದ ಅಧ್ಯಕ್ಷ ವಿಜಯಶೆಟ್‌ ಅನುಭಾವ ಗೋಷ್ಠಿಗಳ ಅಧ್ಯಕ್ಷತೆ  ವಹಿಸುವರು ಎಂದು ತಿಳಿಸಿದರು.  ರಾಜ್ಯದ ಹಾವೇರಿ, ವಿಜಾಪುರ, ರಾಯಚೂರು, ಕೊಪ್ಪಳ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ 2000ಕ್ಕೂ ಹೆಚ್ಚು ಶರಣರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಜಯ ಮಾಕಲ ಅವರ ‘ಲಿಂಗಾಯತ ಸ್ವತಂತ್ರ ಧರ್ಮ’ ಆಂಗ್ಲ ಭಾಷೆ ಗ್ರಂಥ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದರು.ಧೋತರಗಾಂವ ವಿರಕ್ತ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ಶಿವಬಸಪ್ಪ ಟೆಕ್ಕಳಕಿ, ಪ್ರಭುಲಿಂಗ, ಆದಪ್ಪ ಬಗಲಿ, ರವಿ ಹರಗಿ, ಸಿದ್ರಾಮ ಪೂಜಾರಿ, ರಮೇಶ ಪತ್ತಾರ, ಹಾಜಪ್ಪ, ಸತ್ಯನಾರಾಯಣ, ಸೋಮಶೇಖರ, ಎಂ ಬಸವರಾಜ, ಅಯ್ಯಣ್ಣ ನಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry