ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಲು ಸಲಹೆ

7
ಜಿಲ್ಲಾ ವಿಜ್ಞಾನ ಕೇಂದ್ರದ 30ನೇ ವಾರ್ಷಿಕೋತ್ಸವ

ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಲು ಸಲಹೆ

Published:
Updated:

ಗುಲ್ಬರ್ಗ: ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೆನರಾ ಬ್ಯಾಂಕ್ ಉಪ ಪ್ರಧಾನ ಪ್ರಬಂಧಕ ಬಿ.ಎಂ. ರಾವ್‌ ಹೇಳಿದರು.ಜಿಲ್ಲಾ ವಿಜ್ಞಾನ ಕೇಂದ್ರದ 30ನೇ ವಾರ್ಷಿಕೋತ್ಸವ ಅಂಗವಾಗಿ ಬುಧ­ವಾರ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೇಬು ಅನಾದಿ ಕಾಲದಿಂದಲೂ ಮರ­­ದಿಂದ ಕೆಳಗೆ ಬೀಳುತ್ತಿತ್ತು. ಆದರೆ ಆ ಗ್ಗೆ ಪ್ರಶ್ನಿಸಿ, ಸಂಶೋಧಿಸಿದ ನ್ಯೂಟನ್‌ ಗುರುತ್ವಾಕರ್ಷಣೆ ನಿಯಮ­ವನ್ನು ಕಂಡು ಹಿಡಿದರು. ವಿದ್ಯಾರ್ಥಿ­ಗಳು ಪ್ರತಿ ವಿಚಾರಗಳನ್ನು ಪ್ರಶ್ನಿಸಿ ಅರ್ಥೈಸಿ­ಕೊಂ­ಡರೆ ಮಾತ್ರ ಬದುಕಿನಲ್ಲಿ ಬೆಳೆಯಲು ಸಾಧ್ಯ ಎಂದ ಅವರು, ಮೂಢನಂಬಿಕೆ­ಯನ್ನು ಹೊಡೆದು ಹಾಕುವುದು ಹಾಗೂ ಬಾಲಕಿಯರ ಶಿಕ್ಷಣಕ್ಕೆ ಆದ್ಯತೆ ನೀಡುವುದು ಕೆನರಾ ಬ್ಯಾಂಕ್‌ ಮೂಲ ಧ್ಯೇಯಗಳಲ್ಲಿವೆ ಎಂದರು.ವಿದ್ಯಾರ್ಥಿಗಳು ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಮೂಲಕ ಉಳಿತಾಯ ಮನೋಭಾವವನ್ನು ಬಾಲ್ಯದಲ್ಲಿಯೇ ಬೆಳೆಸಿಕೊಳ್ಳಬೇಕು ಎಂದ ಅವರು, ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್‌ಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.ಅತ್ಯುತ್ತಮ ವಿಜ್ಞಾನ ಕೇಂದ್ರವನ್ನು ಗುಲ್ಬರ್ಗ ಹೊಂದಿದೆ. ಚಹಾ, ಚಾಕಲೇಟ್‌ ದರಕ್ಕಿಂತ ಕಡಿಮೆ (₨5) ದರದಲ್ಲಿ ವಿಜ್ಞಾನ ವಿಸ್ಮಯಗಳನ್ನು ವಿದ್ಯಾರ್ಥಿಗಳು ಇಲ್ಲಿ ನೋಡಬಹು­ದಾಗಿದೆ. ಇದರ ಸದುಪಯೋಗವನ್ನು ಮಕ್ಕಳಿಗೆ ಕೊಡಿಸಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಕೆ. ಚಳಗೇರಿ ಪೋಷಕರಿಗೆ ಸಲಹೆ ನೀಡಿದರು.ಪ್ರೌಢಶಾಲೆಯು ವ್ಯಕ್ತಿಯ ಭವಿಷ್ಯ ನಿರ್ಮಾಣದ ‘ಪ್ರೌಢ’ ಅವಧಿ. ಈ ಅವಧಿಯಲ್ಲಿ ಮಕ್ಕಳಿಗೆ ವೈಜ್ಞಾನಿಕ ಚಿಂತನೆಯನ್ನು ನೀಡಬೇಕು. ಅದಕ್ಕೆ ವಿಜ್ಞಾನ ಕೇಂದ್ರ ಸೂಕ್ತ ಸ್ಥಳ ಎಂದ ಅವರು, ವಿಜ್ಞಾನ ಕೇಂದ್ರ ಎಂದರೆ ಕೆರೆ ದಂಡೆ ಮೇಲಿನ ಗುಡಿ ಅಲ್ಲ. ಅದು ಹೊಸ ಚಿಂತನೆ ಹಾಗೂ ಭವಿಷ್ಯ ನಿರ್ಮಾಣದ ಹಾದಿ ತೋರುವ ಕೇಂದ್ರ ಎಂದರು. ಪ್ರಕೃತಿಯ ನಿಯಮಗಳು ಎಲ್ಲ ಸ್ಥಳ ಮತ್ತು ಸಮಯದಲ್ಲಿ ಒಂದೇ ಆಗಿರುತ್ತವೆ.ಅದಕ್ಕಾಗಿ ನಾವು ವೈಜ್ಞಾನಿಕ ಚಿಂತನೆ ಮಾಡಬೇಕು. ವಿಜ್ಞಾನ ಎಂಬುದು ಕಲ್ಪನೆಯನ್ನು ಸಾಕಾರಗೊಳಿಸುವ ಮಾರ್ಗ. ಇಲ್ಲಿ ಸಿದ್ಧಾಂತ, ಪ್ರಮೇಯಕ್ಕಿಂತ ಪ್ರಯೋ­ಗದ ಅನುಭವ ವಿಭಿನ್ನ ಆಗಬಹುದು ಎಂದು ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.ವಿಜ್ಞಾನ ವಿಷಯವನ್ನು ತೆಗೆದು­ಕೊಂಡು ಗುಲ್ಬರ್ಗದಲ್ಲಿ ವಿದ್ಯಾಭ್ಯಾಸ ಮಾಡಿರುವುದು ನನ್ನ ಹಾಗೂ ವಿಜ್ಞಾನ ಕೇಂದ್ರ ನಂಟು ಹೆಚ್ಚಿಸಿತ್ತು. ಆ ಅನು­ಭವ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿಯಾಯಿತು ಎಂದರು.ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್‌. ಲಕ್ಷ್ಮೀನಾರಾಯಣ, ಶಿಕ್ಷಣಾಧಿಕಾರಿ ಆರ್‌. ವೆಂಕಟೇಶ್ವರಲು, ತಾಂತ್ರಿಕ ಅಧಿಕಾರಿ ಸೂರ್ಯಕಾಂತ ಮಸ್ಕಿನ್‌ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry