‘ಸೇಡಂ ಉತ್ಸವ ಆಚರಣೆ’ ಭರದ ಸಿದ್ಧತೆ

7

‘ಸೇಡಂ ಉತ್ಸವ ಆಚರಣೆ’ ಭರದ ಸಿದ್ಧತೆ

Published:
Updated:

ಸೇಡಂ: ಸಂಕ್ರಾಂತಿ ಹಬ್ಬದಂದು ‘ಸೇಡಂ ಉತ್ಸವ’ವನ್ನು ಅದ್ದೂರಿಯಿಂದ ಆಚರಿಸಲು ಉತ್ಸವ ಸಮಿತಿ ಪೂರ್ವ­ಭಾವಿ­ಯಾಗಿ ಗುರುವಾರ ಹಲವಾರು  ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಕಳೆದ ಭಾನುವಾರ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ  ಸದಾಶಿವ ಸ್ವಾಮಿಜಿ ಅವರ ನೇತೃತ್ವದಲ್ಲಿ ಸಮಿತಿ ಅಧ್ಯಕ್ಷ ಮತ್ತು ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ  ಪೂರ್ವಭಾವಿ ಸಿದ್ದತಾ ಸಭೆ ನಡೆದಿತ್ತು. ಸೋಮವಾರ ದಿಂದ ಗುರುವಾರದ ವರೆಗೆ ಬಕೆಟ್‌–ಬಾಲ್‌ ಸ್ಪರ್ಧೆಯಲ್ಲಿ 150 ಜನ ಮಹಿಳೆಯರು ಭಾಗವಹಿಸಿ­ದ್ದರು. ರಂಗೋಲಿ ಸ್ಪರ್ಧೆಗೆ 137, ಫ್ಯಾನ್ಸಿ–15, ಜಾನಪದ ಮತ್ತು ಭಕ್ತಿಗೀತೆ ಸ್ಪರ್ಧೆಗೆ 15, ಚಿತ್ರಕಲೆಗೆ 167 ಶಾಲೆಯ ಮಕ್ಕಳು ಮತ್ತು ಮಹಿಳೆಯರು, ನಿಬಂಧ ಸ್ಪರ್ಧೆಗೆ 36 ಮಕ್ಕಳು ಭಾಗವಹಿಸಿದ್ದರು.ಗುರುವಾರ ಮಹಿಳೆಯರ ವೇಶಭೂಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ ಜರುಗಿದವು ಎಂದು ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರಪ್ಪ ಡೊಳ್ಳಾ  ತಿಳಿಸಿದ್ದಾರೆ .ಉತ್ಸವ ದಿನದಂದು ಕುಂಭ ಮೇಳ, ಮೆರವಣಿಗೆ, ರಾಷ್ಟ್ರಕೂಟರ ಇತಿಹಾಸ ಸಾರುವ ಬ್ಯಾನರ್‌ ಪ್ರದರ್ಶನ ನಡೆಯಲಿವೆ. ಅಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರನ್ನು ಸನ್ಮಾನಿಸಲಾಗುವುದು’  ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry