ಶುದ್ಧೀಕರಣ ಘಟಕ ಕಾಮಗಾರಿ ಪೂರ್ಣ

7

ಶುದ್ಧೀಕರಣ ಘಟಕ ಕಾಮಗಾರಿ ಪೂರ್ಣ

Published:
Updated:

ಚಿಂಚೋಳಿ: ‘ಪಟ್ಟಣದ ಹೊರ ವಲಯದ ಬೀಜೋತ್ಪಾದನಾ ಕೇಂದ್ರ­ದಲ್ಲಿ ತಲೆ ಎತ್ತಿದ ಚಂದಾಪುರಕ್ಕೆ ಶುದ್ಧ ನೀರು ಪೂರೈಸುವ ಕುಡಿವ ನೀರಿನ ಶುದ್ಧೀಕರಣ ಘಟಕ ಸ್ಥಾಪನೆಯ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಜಲಮಂಡಳಿಯ ಶಾಖಾಧಿ­ಕಾರಿ ದಿಲೀಪಸಿಂಗ್‌ ತಿಳಿಸಿದ್ದಾರೆ.ಈಚೆಗೆ ಕುಡಿವ ನೀರಿನ ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸುವ ಪ್ರಕ್ರಿಯೆಯ ಪ್ರಾಯೋಗಿಕ ಪರೀಕ್ಷೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.ಶುದ್ಧೀಕರಣ ಘಟಕ ₨1.25 ಕೋಟಿ ವೆಚ್ಚದಲ್ಲಿ ತಲೆ ಎತ್ತಿದೆ. ಮುಲ್ಲಾಮಾರಿ ನದಿಯಲ್ಲಿರುವ ಹಳೆಯ ಜಾಕವೆಲ್‌­ನಿಂದ ಕಚ್ಚಾ ನೀರು ಪಡೆದು ಅವುಗ­ಳನ್ನು ಶುದ್ಧೀಕರಣ ಘಟಕದ ವಿವಿಧ ಕಡೆ ಸಾಗಿಸಿ ಟ್ಯಾಂಕ್‌ ಮೂಲಕ ಚಂದಾಪುರ ನಾಗರಿಕರ ಮನೆಗಳು ಮತ್ತು ಸಾರ್ವಜನಿಕ ನಲ್ಲಿಗಳಿಗೆ ಪೂರೈಸುವ ಮುಖ್ಯ ಟ್ಯಾಂಕ್‌ವರೆಗೆ ನೀರು ಸರಬರಾಜು ಮಾಡಿ ಯಶಸ್ವಿ ಪ್ರಯೋಗ ನಡೆಸಿದರು.

ಸದ್ಯ 63 ಕೆವಿ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕವಿದೆ. ಇದನ್ನು ಬದಲಿಸಿ ಜೆಸ್ಕಾಂ 100 ಕೆವಿ ಸಾಮರ್ಥ್ಯದ ಪರಿವರ್ತಕ ಸ್ಥಾಪಿಸ­ಬೇಕಾಗಿದೆ. ಈಗ ಇದೊಂದೆ ಕೆಲಸ ಬಾಕಿ. ಇದನ್ನು ಪೂರ್ಣಗೊಳಿಸಿದರೆ ಉದ್ಘಾಟನೆ ನಡೆಸಬಹುದು ಎಂದರು.ದಿನಕ್ಕೆ 20 ದಶಲಕ್ಷ ಲೀಟರ್‌ ನೀರು ಶುದ್ಧೀಕರಿಸುವ ಸಾಮರ್ಥ್ಯದ ಶುದ್ಧೀಕ­ರಣ ಘಟಕದಲ್ಲಿ ಹಳೆ ಜಾಕವೆಲ್‌ನಲ್ಲಿ 40 ಎಚ್‌.ಪಿ ಮೋಟಾರ್‌­(ಡಿಡಬೂ್ಲ್ಯಟಿ), ಏರಿಯೇಟರ್‌, ಅಲಮ್‌(ರಸಾಯನಿಕ) ದಾಸ್ತಾನು ಕೋಣೆ, ಮಿಕ್ಸರ್‌, ಫ್ಲಾಶ್‌ ಮಿಕ್ಸರ್‌, ಸೆಟಲಿಂಗ್‌ ಟ್ಯಾಂಕ್‌, ಶುದ್ದೀಕರಣ ಬೆಡ್‌, 2 ಲಕ್ಷ ಲೀಟರ್‌ ಸಾಮರ್ಥ್ಯದ ನೆಲಮ್ಮದ ಜಲ ಸಂಗ್ರಹಗಾರ,ಪಂಪ್‌ ಹೌಸ್‌ ಮತ್ತು ಕಚೇರಿ ಕೋಣೆ ನಿರ್ಮಿಸ­ಲಾಗಿದೆ. ಜತೆಗೆ ನೀರು ಎತ್ತಿ ಸಾಗಿಸು­ವುದಕ್ಕೆ 40 ಎಚ್‌.ಪಿ. ಸಾಮರ್ಥ್ಯದ 2 ಮೋಟಾರ್‌ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.ಚಿಂಚೋಳಿ ಚಂದಾಪುರ ಅವಳಿ ಪಟ್ಟಣಗಳ ಪೈಕಿ, ಶುದ್ಧ ಕುಡಿವ ನೀರು ಪೂರೈಕೆಯ ಚಂದಾಪುರ ನಾಗರಿಕರ ಬಹುದಿನಗಳ ಕನಸು ಪಟ್ಟಣ ಪಂಚಾ­ಯಿತಿ ನನಸು ಮಾಡಿದೆ ಎಂದು ಸದಸ್ಯ ಅಬ್ದುಲ್‌ ಬಾಷೀತ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry