ಹೊಲದ ತುಂಬ ‘ಸುಗಂಧರಾಜ’ನ ಪರಿಮಳ

7

ಹೊಲದ ತುಂಬ ‘ಸುಗಂಧರಾಜ’ನ ಪರಿಮಳ

Published:
Updated:

ಗುಲ್ಬರ್ಗ: ‘ಒಂದೂವರೆ ವರ್ಷದ ಹಿಂದೆ ಗೆಳೆಯರೊಬ್ಬರು ಸುಗಂಧರಾಜ ಹೂವಿನ ಬೀಜ ನೀಡಿ ಅದನ್ನು ಹೊಲದಲ್ಲಿ ಬಿತ್ತಿ ನೋಡು ಎಂದು ಸಲಹೆ ನೀಡಿದರು. ಆಗಲಿ ಎಂದು ಅರ್ಧ ಎಕರೆ ಹೊಲದಲ್ಲಿ ಬೀಜ ಬಿತ್ತಿದೆ. ಮೂರೇ ತಿಂಗಳಿಗೆ ಗಿಡದಲ್ಲಿ ಹೂವು ಅರಳಿತ್ತು. ಆಗ ಮಾರಾಟ ಮಾಡುವ ಬಗ್ಗೆ ಗೊತ್ತಿರಲಿಲ್ಲ. ಆರಂಭದಲ್ಲಿ ಕೊಯ್ದ ಮೂರು ಕೆ.ಜಿ. ಹೂವನ್ನು ಗುಲ್ಬರ್ಗದ ಸೂಪರ್‌ ಮಾರ್ಕೆಟ್‌ಗೆ ಮಾರಲು ಕೊಂಡೊಯ್ದೆ.ಆಗ ಚೀಲದಿಂದ ಹೂವನ್ನು ಹೊರ ತೆಗೆಯಲು ಮುಜುಗರ ಕಾಡುತ್ತಿತ್ತು. ಕೊನೆಗೆ ವ್ಯಾಪಾರಿಯೊಬ್ಬರಿಗೆ ಹೂ ನೀಡಿದೆ. ಅವರು ಕೆ.ಜಿ.ಗೆ ₨೩೦೦ರಂತೆ 3 ಕೆ.ಜಿಗೆ. ₨ ೯೦೦ ನೀಡಿದರು. ನನ್ನ ಸಂತೋಷಕ್ಕೆ ಪಾರವೇ ಇಲ್ಲ, ಹೂ ಬೆಳೆದು ಇಷ್ಟು ಲಾಭ ಸಾಧಿಸಬಹುದು ಎಂದು ಅದುಕೊಂಡಿರಲಿಲ್ಲ...’ಅರ್ಧ ಎಕರೆಯಲ್ಲಿ ಸುಗಂಧರಾಜ ಹೂವಿನ ಕೃಷಿ ಮಾಡಿ ಒಂದೇ ವರ್ಷಕ್ಕೆ ₨೧ಲಕ್ಷ ಲಾಭ ಪಡೆದ ಕಮಲಾಪುರ ಬಳಿಯ ಡೊಂಗರ ಗಾಂವದ ರೈತ ಉದಯಕುಮಾರ ಎಸ್‌. ಜನಕಟ್ಟಿ ಅವರ ನುಡಿ.ಬಿ.ಎ. ಪದವೀಧರರಾಗಿರುವ ಇವರು ವ್ಯಾಪಾರ ದತ್ತ ಒಲವು ತೋರಿದ್ದರೂ ಕಾರಣಾಂತರ ಗಳಿಂದ ಹೊಲದ ಕಡೆ ಮುಖ ಮಾಡಿದವರು. ಆರಂಭದಲ್ಲಿ ತರಕಾರಿ ಕೃಷಿ , ಹೈನುಗಾರಿಕೆ ಯನ್ನೂ ಮಾಡಿದ್ದರು. ಆದರೆ ಇದ್ಯಾವುದ ರಲ್ಲೂ ನಿರೀಕ್ಷಿಸಿದಷ್ಟು ಯಶಸ್ಸು ಸಾಧಿಸಲಾಗ ಲಿಲ್ಲ. ಇಂತಹ ಸಂದರ್ಭದಲ್ಲಿ ಅವರ ಕೈ ಹಿಡಿದದ್ದು ಸುಗಂಧರಾಜ ಹೂವಿನ ಕೃಷಿ.ಅರ್ಧ ಎಕರೆ ಜಾಗದಲ್ಲಿ ಆರಂಭಿಸಿದ ಈ ಕೃಷಿಯನ್ನು ಎರಡನೇ ವರ್ಷವಾದ ಈ ಬಾರಿ ಒಂದೂವರೆ ಎಕರೆಗೆ ವಿಸ್ತರಿಸಿದ್ದಾರೆ. ಚೀಲಕ್ಕೆ ₨೧,೦೦೦ದಂತೆ ನೀಡಿ ೮ಚೀಲ ಬೀಜ ತಂದು ಬಿತ್ತಿದ್ದಾರೆ. ಅಲ್ಲದೆ ₨೧೫,೦೦೦ ಖರ್ಚು ಮಾಡಿ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದಾರೆ. ಜಮೀನು ಅಂಚಿನ ಬಾವಿ ಬೇಸಿಗೆಯಲ್ಲೂ ಬತ್ತದೆ ನೀರುಣಿಸುತ್ತಿದೆ. ಈ ಕೃಷಿ ಹೆಚ್ಚಿಗೆ ನೀರು ಬಯಸುವುದಿಲ್ಲ. ಇವರು ಕೂಲಿ ಆಳುಗಳನ್ನೂ ಇರಿಸದೆ ತಾವೇ ದುಡಿಯುತ್ತಿದ್ದಾರೆ. ಅಗತ್ಯವಿದ್ದರಷ್ಟೆ ಆಳುಗಳ ಮೊರೆ ಹೋಗುತ್ತಾರೆ.  ಅಲ್ಲದೆ ಬರೀ ಕೊಟ್ಟಿಗೆ ಗೊಬ್ಬರ ಹಾಕಿ ಹೂವು ಬೆಳೆಸಿದ್ದಾರೆ.ವಿಭಿನ್ನ ಪ್ರಯೋಗ: ಮೂರೂವರೆ ಎಕರೆ ನೀರಾವರಿ ಜಮೀನಿನಲ್ಲಿ ಒಂದೂವರೆ ಎಕರೆ ಯಲ್ಲಿ ಸುಗಂಧ ರಾಜ ಹೂ ಬೆಳೆಸಿದರೆ, ಅರ್ಧ ಎಕರೆಯಲ್ಲಿ ಗುಲಾಬಿ ಗಿಡ ನಾಟಿ ಮಾಡಿ ದ್ದಾರೆ. ೧೫ ಗುಂಟೆ ಜಮೀನಿನಲ್ಲಿ ಪುದೀನ, ೨೦ ಗುಂಟೆ ಪ್ರದೇಶ ದಲ್ಲಿ ಸಾಸಿವೆ ಕೃಷಿ ಮಾಡಿದ್ದಾರೆ. ಅರ್ಧ ಎಕರೆಯಲ್ಲಿ ಮೆಣಸಿನ ಗಿಡ ನೆಟ್ಟು ಮಧ್ಯದಲ್ಲಿ ಅಂತರ ಬೇಸಾಯವಾಗಿ ಬಿಳಿಎಳ್ಳು ಬೆಳೆಯಲು ತಯಾರಿ ನಡೆಸಿದ್ದಾರೆ. ‘ಫೆಬ್ರುವರಿಯಿಂದ ಆಗಸ್ಟ್‌ವರೆಗೆ  ಹೂವಿನ ಸೀಸನ್‌. ಆಗ ಸುಗಂಧರಾಜಕ್ಕೆ ಕೆ.ಜಿ.ಗೆ ₨೨೫೦ರ ಮೇಲೆ ಬೆಲೆ ಇರುತ್ತದೆ. ಚಳಿಗಾಲದಲ್ಲಿ ಇಳುವರಿ ಕಡಿಮೆ. ಜೂನ್‌ ತಿಂಗಳಲ್ಲಿ ಎಕರೆಗೆ ೫೦ರಿಂದ ೬೦ಕೆ.ಜಿ. ಹೂ ಪಡೆಯಬಹುದು. ಈ ಕೃಷಿಗೆ ರೋಗವೇ ಬರು ವುದಿಲ್ಲ ಎನ್ನುತ್ತಾರೆ ಉದಯಕುಮಾರ.ಸುಗಂಧರಾಜ ಹೂವನ್ನು ಗುಲ್ಬರ್ಗದ ಸೂಪರ್‌ ಮಾರ್ಕೆಟ್‌ನ ವ್ಯಾಪಾರಿಗಳಿಗೆ ತಂದು ಮಾರುತ್ತಾರೆ.

ಮಾಹಿತಿಗೆ ಮೊ:(೯೯೪೫೭ ೫೩೦೭೭).‘ನಮಗೂ ಸ್ಫೂರ್ತಿ ದೊರಕಿದೆ’

‘ಈ ಭಾಗದಲ್ಲಿ ಮೊದಲು ಸುಗಂಧರಾಜ ಬೆಳೆದ ಉದಯಕುಮಾರ್‌ ಅವರ ಯಶಸ್ಸು ನಮಗೂ ಸ್ಫೂರ್ತಿ ನೀಡಿದೆ. ನಾನು ಎರಡು ಎಕರೆಯಲ್ಲಿ ತೊಗರಿ ಬೆಳೆದಿದ್ದೇನೆ. ತೊಗರಿ ಕಟಾವು ಆದ ಕೂಡಲೇ ಅಲ್ಲಿಯೂ ಸುಗಂಧರಾಜ ಪುಷ್ಪ ಬೆಳೆಯಲು ತೀರ್ಮಾನಿಸಿದ್ದೇನೆ.

ಶಿವಾನಂದ ಎಸ್‌.ಚಿಗ್ಗೋಣಿ,

ರೈತ ಡೊಂಗರಗಾಂವ‘ಕಡಿಮೆ– ಹೂಡಿಕೆ– ಹೆಚ್ಚು ಲಾಭ


‘ನಾನು ಸುಗಂಧರಾಜ ಹೂವಿನ ಕೃಷಿ ಆರಂಭಿಸಿ ದಾಗ ಮೂಗು ಮುರಿದ ವರೇ ಹೆಚ್ಚು. ಇಂದು ನನ್ನಿಂದ ಸ್ಫೂರ್ತಿ ಪಡೆದು ಐದಾರು ಮಂದಿ ಈ ಕೃಷಿ ಆರಂಭಿಸಿ ದ್ದಾರೆ. ಇದು ಹೆಚ್ಚು ಹೂಡಿಕೆ ಬಯಸದ ಮತ್ತು ಅಧಿಕ ಲಾಭ ನೀಡುವ ಕೃಷಿ. ಸರ್ಕಾರವೂ ಪ್ರತಿ ಎಕರೆ ಸುಗಂಧರಾಜ ಬೆಳೆಗೆ ₨18,000 ಪ್ರೋತ್ಸಾಹಧನ ನೀಡು ತ್ತಿದೆ. ಒಂದೂವರೆ ಎಕರೆಯಲ್ಲಿ ಬೆಳೆದ ಹೂವಿಗೆ ವರ್ಷಕ್ಕೆ ₨5ಲಕ್ಷ ನೀಡುತ್ತೇವೆ. ನಮಗೇ ಹೂ ಕೊಡಿ’ ಎಂದು ಗುಲ್ಬರ್ಗದ ಹೂವಿನ ವ್ಯಾಪಾರಿಗಳು ಕೇಳಿಕೊಂಡಿದ್ದಾರೆ. ಆದರೆ ಅದಕ್ಕಿಂತಲೂ ಅಧಿಕ ಲಾಭ ಪಡೆಯ ಬಹುದಾಗಿರುವು ದರಿಂದ ನಾನು ಒಪ್ಪಿಲ್ಲ.’

ಉದಯಕುಮಾರ,

ಸುಗಂಧರಾಜ ಬೆಳೆಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry