ಸೋಮವಾರ, ಜುಲೈ 26, 2021
26 °C

ಶರಣ ಸಂಸ್ಕೃತಿ ಆಚರಣೆ ಅತ್ಯಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ಬಸವಾದಿ ಶರಣರ ಸಂಸ್ಕೃತಿಯು ನಮ್ಮ ನಿತ್ಯ ಜೀವನದಲ್ಲಿ ಆಚರಣೆಗೆ ತರಬೇಕು. ಈ ಮೂಲಕ ಶರಣರ ಕಲ್ಪನೆಯ ಸಮಾಜ ಕಟ್ಟಲು ಸಾಧ್ಯ ಎಂದು ಸಮ್ಮೇಳನಾಧ್ಯಕ್ಷ ಆರ್.ಎಸ್.ಸ್ವಾಮಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಗಡಿಗ್ರಾಮ ಖಜೂರಿಯಲ್ಲಿ ನಡೆದ ಪ್ರಥಮ ಶರಣ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾತನಾಡುತ್ತಿದ್ದರು. ಗುರು, ಲಿಂಗ, ಜಂಗಮಾದಿಗಳು ಶರಣ ಸಂಸ್ಕೃತಿಯ ಆಧಾರ ಸ್ತಂಭಗಳಾಗಿದ್ದು, ಇಹವನ್ನು ಹಳಿದು ಪರಕ್ಕೆ ಆಸೆ ಮಾಡುವುದು ಶರಣ ಸಂಸ್ಕೃತಿ ಅಲ್ಲ ಎಂದು ಹೇಳಿದರು.ಶರಣ ಸಂಸ್ಕೃತಿಯು ಸಾಂಸಾರಿಕ ಬದುಕಿನಲ್ಲಿ ಇದ್ದುಕೊಂಡು ಶಿವ ಸಾಕ್ಷಾತ್ಕಾರ ಹೊಂದುವುದನ್ನು ಒಪ್ಪಿಕೊಳ್ಳುತ್ತದೆ. ಹೀಗಾಗಿ ಶರಣ ಪರಂಪರೆಯು ಕಾಯಕ ತತ್ವದ ತಳಹದಿಯ ಮೇಲೆ ಜಾತ್ಯತೀತ ಸಂಸ್ಕೃತಿಯನ್ನು ರೂಪಿಸುವಲ್ಲಿ ಬಸವಾದಿ ಶರಣರ ಕೊಡುಗೆ ಅನನ್ಯವಾದುದು ಎಂದು ತಿಳಿಸಿದರು.ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮಿಗಳು ಮಠಮಾನ್ಯಗಳು ನೀತಿ, ಸಮಾನತೆ ಕಾಯ್ದುಕೊಂಡು ಬರಬೇಕು. ಸಾಮಾಜಿಕ ಸೇವೆಯಲ್ಲಿ ನಿಸ್ವಾರ್ಥದಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ದಾವಣಗೆರೆ ಬಸವ ಕೇಂದ್ರದ ಬಸವಪ್ರಭು ಸ್ವಾಮಿಗಳು ಕಾರ್ಯಕ್ರಮದ ಸಮ್ಮುಖ ವಹಿಸಿದರು.ಪೀಠಾಧಿಪತಿ ಮುರುಘೇಂದ್ರ ಕೋರಣೇಶ್ವರ ಸ್ವಾಮಿ, ಫಲಹಾರೇಶ್ವರ ಸ್ವಾಮಿಗಳು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ ಸಾವಳೇಶ್ವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ ಢಗೆ ಮತ್ತಿತರರು ಉಪಸ್ಥಿತರಿದ್ದರು. ಶರಣಬಸಪ್ಪ ವಡಗಾಂವ ಸಮ್ಮೇಳನಾಧ್ಯಕ್ಷರನ್ನು ಪರಿಚಯ ಮಾಡಿದರು.ಮುರುಘೇಂದ್ರ ಕೋರಣೇಶ್ವರ ಸ್ವಾಮಿಗಳು ಸ್ವಾಗತಿಸಿದರು. ರಾಜಶೇಖರ ಆರ್ಯ ವಂದಿಸಿದರು.

ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ಎತ್ತಿನ ಬಂಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೋಲಾಟ, ಬಾಜಾ-ಬಜಂತ್ರಿಗಳ ಮೂಲಕ ಭವ್ಯ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.ಉದಯಕುಮಾರ ಕಂದಗೂಳೆ ಸಹಕಾರ ಧ್ವಜಾರೋಹಣ, ಆರ್.ಎಸ್.ಸ್ವಾಮಿ ಅವರಿಂದ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.