ಮತ ಎಣಿಕೆ: ಮತ್ತೆ ‘ಸುಪ್ರೀಂ’ಗೆ ಮೊರೆ

ಶನಿವಾರ, ಮೇ 25, 2019
27 °C

ಮತ ಎಣಿಕೆ: ಮತ್ತೆ ‘ಸುಪ್ರೀಂ’ಗೆ ಮೊರೆ

Published:
Updated:

ನವದೆಹಲಿ: ‘ಪ್ರತಿ ವಿಧಾನಸಭಾ ಕ್ಷೇತ್ರದ ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್‌ ಮತಚೀಟಿಗಳನ್ನು ಮತಯಂತ್ರದ ಜತೆಗೆ ತಾಳೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು’ ಎಂದು 21 ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ 21 ಪಕ್ಷಗಳು ಹಿಂದೆಯೂ ಈ ಮನವಿ ಮಾಡಿದ್ದವು. ಅವರ ಮನವಿಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಪ್ರತಿ ವಿಧಾನಸಭಾ ಕ್ಷೇತ್ರದ ಕನಿಷ್ಠ 5 ಮತಗಟ್ಟೆಗಳ ವಿವಿಪ್ಯಾಟ್‌ ಮತಚೀಟಿ ಗಳನ್ನು ಮತಯಂತ್ರದ ಜೊತೆ ತಾಳೆ ಮಾಡುವಂತೆ ಆಯೋಗಕ್ಕೆ ಏಪ್ರಿಲ್‌ 8ರಂದು ಸೂಚನೆ ನೀಡಿತ್ತು. 

ಮೊದಲ 3 ಹಂತಗಳ ಚುನಾವಣೆ ಯಲ್ಲಿ ಅನೇಕ ಮತ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ದೂರು ಬಂದಿರುವುದರಿಂದ ರಾಜಕೀಯ ಪಕ್ಷಗಳು ಪುನಃ ಸುಪ್ರೀಂ ಕೋರ್ಟ್‌ ಮೊರೆಹೋಗಿವೆ.

ಬರಹ ಇಷ್ಟವಾಯಿತೆ?

  • 9

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !