ಭಾನುವಾರ, ಜೂನ್ 13, 2021
25 °C

ವೈದ್ಯರ ಮೇಲೆ ಹಲ್ಲೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಉತ್ತರ ಪ್ರದೇಶದ ಕಾನ್ಪುರ­ನಲ್ಲಿ ವೈದ್ಯ ವಿದ್ಯಾರ್ಥಿಗಳ ಮೇಲಿನ ಕಿರುಕುಳ ಹಾಗೂ ಜಿಲ್ಲೆಯಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ಖಂಡಿಸಿ ಭಾರತೀಯ ವೈದ್ಯಕೀಯ ಅಸೋಸಿಯೇಷನ್ (ಐಎಂಎ) ಸದಸ್ಯರು ನಗರದ ಜಿಲ್ಲಾಧಿ­ಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ಕಾನ್ಪುರದ ಸ್ಥಳೀಯ ಶಾಸಕ­ರೊಬ್ಬರು ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನ 25ಕ್ಕೂ ಹೆಚ್ಚು ವಿದ್ಯಾ­ರ್ಥಿಗಳಿಗೆ ಕಿರುಕುಳ ನೀಡಿದ್ದಾರೆ.

ಅಲ್ಲದೇ, 60 ವರ್ಷದ ಪ್ರಾಧ್ಯಾಪಕರ ಮೇಲೆ ಹಲ್ಲೆ ಮಾಡಿದ್ದಾರೆ. ಇಷ್ಟಾದರೂ ಆ ಶಾಸಕರ ಮೇಲೆ ಅಲ್ಲಿನ ಸರ್ಕಾರ ಕ್ರಮಕೈಗೊಂಡಿಲ್ಲ. ಅದೇ ರೀತಿ ಜಿಲ್ಲೆಯಲ್ಲೂ ವೈದ್ಯರ ಮೇಲೆ ಆಗಾಗ ಹಲ್ಲೆ ನಡೆಸಲಾ­ಗುತ್ತಿದೆ.ಇದರಿಂದಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲು ತೊಂದರೆ ಆಗುತ್ತಿದೆ. ಆದ್ದರಿಂದ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರು ಕ್ರಮಕೈ­­ಗೊಳ್ಳಬೇಕು ಎಂದು ಒತ್ತಾಯಿಸಿದರು. ಡಾ.ಕಿರಣ ದೇಶಮುಖ, ಡಾ.ಸಿದ್ದೇಶ, ಡಾ.ನಾಗೇಂದ್ರ ಮಂಠಾಳೆ, ಡಾ.ಅಜಯ್ ಗುಡೂರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.