23 ಕಾರುಗಳನ್ನು ಕದ್ದೊಯ್ದಿದ್ದ ಭೂಪ!

7
ಕೊನೆಗೂ ಸೆರೆ ಸಿಕ್ಕ ಚೇತನ್ l ವಾಹನ ಬಾಡಿಗೆಗೆ ಪಡೆದು ಪರಾರಿಯಾಗುತ್ತಿದ್ದ

23 ಕಾರುಗಳನ್ನು ಕದ್ದೊಯ್ದಿದ್ದ ಭೂಪ!

Published:
Updated:
Deccan Herald

ಬೆಂಗಳೂರು: ಬಾಡಿಗೆ ನೆಪದಲ್ಲಿ ಕಾರುಗಳನ್ನು ಪಡೆದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಚೇತನ್‌ ಕುಮಾರ್ (25) ಎಂಬಾತನನ್ನು ಬಂಧಿಸಿರುವ ಜ್ಞಾನಭಾರತಿ ಪೊಲೀಸರು, ಆತನಿಂದ ₹1.50 ಕೋಟಿ ಮೌಲ್ಯದ 23 ಕಾರುಗಳು ಹಾಗೂ ಟೆಂಪೊ ಟ್ರಾವೆಲರ್ ಜಪ್ತಿ ಮಾಡಿದ್ದಾರೆ.

ಮಂಡ್ಯದ ಗಾಣದಾಳು ಗ್ರಾಮದ ಚೇತನ್, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಕಲಾಸಿಪಾಳ್ಯದ ‘ರುಕ್ಕಮ್ಮ ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್‌’ನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಅವರಿಗೆ ಪಕ್ಕದ ಟ್ರಾವೆಲ್ಸ್‌ನ ಮಾಲೀಕ ಸುನೀಲ್ ಕುಮಾರ್ ಎಂಬುವರ ಪರಿಚಯವಾಗಿತ್ತು.

ನಂತರ ಅಲ್ಲಿ ಕೆಲಸ ತೊರೆದ ಆತ, ‘ನಾನೇ ಸ್ವಂತ ಟ್ರಾವೆಲ್ಸ್ ಪ್ರಾರಂಭಿಸಿದ್ದೇನೆ. ನಿಮ್ಮ ಬಳಿ ಇರುವ ಕಾರುಗಳನ್ನು ನನಗೆ ಕೊಡಿ. ಪ್ರತಿ ವಾಹನಕ್ಕೆ ತಿಂಗಳಿಗೆ ₹ 30 ಸಾವಿರದಂತೆ ಬಾಡಿಗೆ ಕಟ್ಟುತ್ತೇನೆ’ ಎಂದು ಸುನೀಲ್‌ಗೆ ಹೇಳಿದ್ದ. ಆ ಮಾತನ್ನು ನಂಬಿ ಅವರು ನಾಲ್ಕು ಕಾರುಗಳನ್ನು ಕೊಟ್ಟಿದ್ದರು.

ಎರಡು ತಿಂಗಳು ಬಾಡಿಗೆ ಕಟ್ಟಿ ನಂಬಿಕೆ ಉಳಿಸಿಕೊಂಡ ಚೇತನ್, ಬಳಿಕ ಸುನೀಲ್ ಮೂಲಕ ಅವರ ಸ್ನೇಹಿತರನ್ನೂ ಪರಿಚಯ ಮಾಡಿ
ಕೊಂಡಿದ್ದ. ಹೆಚ್ಚಿನ ಬಾಡಿಗೆ ಕೊಡುವುದಾಗಿ ನಂಬಿಸಿ ಅವರಿಂದಲೂ ವಾಹನಗಳನ್ನು ಪಡೆದಿದ್ದ. ಆ ನಂತರ ಬಾಡಿಗೆಯನ್ನೂ ಕಟ್ಟದೆ, ಕಾರುಗಳನ್ನೂ ಮರಳಿಸದೆ ಒಂದು ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಾರುಗಳನ್ನು ಮಾರಿದ್ದ: ‘ನಕಲಿ ದಾಖಲೆಗಳನ್ನು ಸೃಷ್ಟಿಸಿ ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಒಂದರಂತೆ ಬೆಂಗ‌ಳೂರು, ಮೈಸೂರು, ಮಂಡ್ಯ ಹಾಗೂ ಕನಕಪುರದಲ್ಲಿ 23 ಕಾರುಗಳನ್ನೂ ಮಾರಿದ್ದ. ಚೇತನ್‌ನ ವಿರುದ್ಧ ಸುನೀಲ್ ಸೆ.23ರಂದು ಜ್ಞಾನಭಾರತಿ ಠಾಣೆ ಮೆಟ್ಟಿಲೇರಿದ್ದರು.

‘ಕಾರುಗಳ ಮಾರಾಟದಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಚೇತನ್‌, ಗೆಳೆಯರ ಜತೆ ಗೋವಾಗೆ ಹೋಗಿ ಮೋಜು ಮಾಡುತ್ತಿದ್ದ. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಮಲ್ಲತ್ತಹಳ್ಳಿಯಲ್ಲಿ ವಶಕ್ಕೆ ಪಡೆದೆವು’ ಎಂದು ಪೊಲೀಸರು ಹೇಳಿದರು.

ಜಾಹೀರಾತು ಕೊಟ್ಟು ಕಾರು ಕದ್ದಿದ್ದರು!

‘ಕಾರುಗಳು ಬಾಡಿಗೆಗೆ ಬೇಕು’ ಎಂದು ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿ, ಸಾರ್ವಜನಿಕರಿಗೆ ವಂಚಿಸಿ ಕಾರು ಕದ್ದೊಯ್ಯುತ್ತಿದ್ದ ಮೂವರು ಕೆ.ಪಿ.ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೆ.ಜಿ.ಹಳ್ಳಿಯ ನಾಸಿರ್ ಅಹಮದ್, ಆರ್‌.ಟಿ.ನಗರದ ಇಮ್ಮಾದ್ ಖಾನ್ ಹಾಗೂ ದಾವಣಗೆರೆಯ ಇಮ್ತಿಯಾಜ್ ಎಂಬುವರನ್ನು ಬಂಧಿಸಿ, ₹ 50 ಲಕ್ಷ ಮೌಲ್ಯದ ಆರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಆರೋಪಿಗಳು ಹೆಚ್ಚಿನ ಬಾಡಿಗೆ ಕೊಡುವುದಾಗಿ ಜಾಹೀರಾತು ಪ್ರಕಟಿಸುತ್ತಿದ್ದರು. ಕಾರು ಕೊಡಲು ಮುಂದೆ ಬರುವವರನ್ನು ತಮ್ಮ ನಯವಾದ ಮಾತುಗಳಿಂದ ಗಮನ ಸೆಳೆಯುತ್ತಿದ್ದರು. ಕಡೆಗೆ ಕಾರು ಪಡೆದುಕೊಂಡು ಸಂಪರ್ಕಕ್ಕೆ ಸಿಗದೆ ಪರಾರಿಯಾಗುತ್ತಿದ್ದರು.

ಕದ್ದ ವಾಹನಗಳನ್ನೆಲ್ಲ ಶಿವಮೊಗ್ಗದ ಆದಿಲ್ ಅಹಮದ್ ಹಾಗೂ ಚೆನ್ನೈನ ಸುಧಾಕರ್ ಎಂಬುವರಿಗೆ ಮಾರಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೇತನ್‌ ಕದ್ದಿದ್ದ ಕಾರುಗಳ ವಿವರ

ಯಾವ ಕಾರು ಎಷ್ಟು

ಇನೋವಾ 1

ತವೇರಾ 1

ಲಾಡ್ಜಿ 1

ಇಟಿಯೋಸ್ 8

ಅಕ್ಸೆಂಟ್ 4

ಸ್ವಿಫ್ಟ್ ಡಿಸೈರ್ 6

ವೆರಿಟೋ 1

ಗ್ರ್ಯಾಂಡ್ ಐ–10 1

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !