ನೇಪಾಳದಲ್ಲಿ ಬಿರುಗಾಳಿ ಮಳೆಗೆ 27 ಮಂದಿ ಬಲಿ; 400 ಜನರಿಗೆ ಗಾಯ

ಶುಕ್ರವಾರ, ಏಪ್ರಿಲ್ 26, 2019
21 °C

ನೇಪಾಳದಲ್ಲಿ ಬಿರುಗಾಳಿ ಮಳೆಗೆ 27 ಮಂದಿ ಬಲಿ; 400 ಜನರಿಗೆ ಗಾಯ

Published:
Updated:

ಕಾಠ್ಮಂಡು: ನೇಪಾಳದ ದಕ್ಷಿಣ ಭಾಗದಲ್ಲಿ ಸಂಭವಿಸಿದ ಬಿರುಗಾಳಿ ಸಹಿತ ಮಳೆಯ ಆರ್ಭಟದಲ್ಲಿ ಕನಿಷ್ಠ 27 ಮಂದಿ ಸಾವಿಗೀಡಾಗಿದ್ದು, 400 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. 

ಬಾರಾ ಮತ್ತು ಪಾರ್ಸಾ ಜಿಲ್ಲೆಗಳ ಹಲವು ಗ್ರಾಮಗಳು ಭಾನುವಾರದ ಮಳೆ ಬಿರುಗಾಳಿಯ ಆರ್ಭಟಕ್ಕೆ ಸಿಲುಕಿ ನಲುಗಿ ಹೋಗಿವೆ. ಕಾಠ್ಮಂಡುವಿನಿಂದ ದಕ್ಷಿಣಕ್ಕೆ 128 ಕಿ.ಮೀ. ದೂರದಲ್ಲಿರುವ ಬಾರಾ ಜಿಲ್ಲೆ ಒಂದರಲ್ಲಿಯೇ 24 ಮಂದಿ ಮೃತಪಟ್ಟಿದ್ದಾರೆ. ಪಾರ್ಸಾದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿರುವುದಾಗಿ ಗೃಹ ಸಚಿವಾಲಯ ತಿಳಿಸಿದೆ. 

ಗಾಯಗೊಂಡಿರುವ 400ಕ್ಕೂ ಹೆಚ್ಚು ಜನರು ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ರಾಷ್ಟ್ರೀಯ ತುರ್ತು ಕಾರ್ಯಾಚರಣೆ ಕೇಂದ್ರ ಹೇಳಿದೆ. 

ಮೃತಪಟ್ಟವರ ಕುಟುಂಬ ವರ್ಗಕ್ಕೆ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಸಾಂತ್ವನ ಹೇಳಿದ್ದಾರೆ. 

ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ ಹಾಗೂ ಪೊಲೀಸ್‌ ಸಿಬ್ಬಂದಿ ಭಾಗಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !