ಕಾಶ್ಮೀರ ಗಡಿಯಲ್ಲಿ ವಿಶ್ವಸಂಸ್ಥೆ ಪಡೆ: ಪಾಕ್ ಸಲಹೆ

7

ಕಾಶ್ಮೀರ ಗಡಿಯಲ್ಲಿ ವಿಶ್ವಸಂಸ್ಥೆ ಪಡೆ: ಪಾಕ್ ಸಲಹೆ

Published:
Updated:

ಕಾಶ್ಮೀರ ಗಡಿಯಲ್ಲಿ ವಿಶ್ವಸಂಸ್ಥೆ ಪಡೆ: ಪಾಕ್ ಸಲಹೆ

ಇಸ್ಲಾಮಾಬಾದ್, ಫೆ. 12 (ಎಎಫ್‌ಪಿ)– ಕಾಶ್ಮೀರದ ಗಡಿಯಲ್ಲಿ ನಿಷ್ಪಕ್ಷಪಾತವಾದ ರಕ್ಷಣಾ ಪಡೆಯನ್ನು ನಿಯೋಜಿಸಲು ಒಪ್ಪಿಕೊಳ್ಳುವಂತೆ ಪಾಕಿಸ್ತಾನ ಭಾರತಕ್ಕೆ ಸಲಹೆ ನೀಡಿದೆ.

ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಬಗ್ಗೆ ಭಾರತವು ಪಾಕಿಸ್ತಾನವನ್ನು ಶುಕ್ರವಾರ ಪುನಃ ಖಂಡಿಸಿದ ನಂತರ ಇಸ್ಲಾಮಾಬಾದ್ ಈ ಸಲಹೆ ನೀಡಿದೆ.

ಪಾಕಿಸ್ತಾನ ಅ‍ಪಪ್ರಚಾರ ನಡೆಸುತ್ತಿದೆ ಎಂದು ಭಾರತ ನಂಬಿದರೆ, ಎರಡು ದೇಶಗಳ ಮಧ್ಯೆ ಇರುವ ನಿಯಂತ್ರಣ ರೇಖೆಯಲ್ಲಿ ವಿಶ್ವ ಸಂಸ್ಥೆಯ ವೀಕ್ಷಣಾ ಪಡೆ ಅಥವಾ ಇನ್ನಾವುದೇ ನಿಷ್ಪಕ್ಷಪಾತವಾದ ರಕ್ಷಣಾ ಪಡೆಗಳನ್ನು ನೇಮಿಸಲು ಭಾರತ ಒಪ್ಪಿಕೊಳ್ಳುವುದು ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರರು ತಿಳಿಸಿದ್ದಾರೆ.

ಧೂಮಪಾನ ಮತ್ತು ಐಕ್ಯೂ

ರೊಚೆಸ್ಟರ್, ಫೆ. 12 (ಎಪಿ)– ಧೂಮಪಾನ ಮಾಡುವವರ ಮಕ್ಕಳು ‘ಕಡಿಮೆ ಬುದ್ಧಿವಂತರು’ ಎಂದು ಸಂಶೋಧನೆಯೊಂದು ತಿಳಿಸಿದೆ.

ಗರ್ಭಿಣಿಯಾದಾಗ ಧೂಮಪಾನ ಮಾಡಿರುವ ಸ್ತ್ರೀಯರ ಮಕ್ಕಳ ಐಕ್ಯೂ ಧೂಮಪಾನ ಮಾಡದಿರುವ ತಾಯಂದಿರ ಮಕ್ಕಳ ಐಕ್ಯೂಗಿಂತ ಕಡಿಮೆ ಎಂದು ಸಂಶೋಧನೆ ತಿಳಿಸಿದೆ.

ಬಾಲಕಿಯರ ಮೇಲೆ ಅತ್ಯಾಚಾರ

ಲಾಗೋಸ್, ಫೆ. 12 (ಐಪಿಎಸ್)– ನೈಜೀರಿಯಾದಲ್ಲಿ ಕನಿಷ್ಠ ಮೂರನೇ ಒಂದರಷ್ಟು ಶಾಲಾ ಬಾಲಕಿಯರು ಅತ್ಯಾಚಾರಕ್ಕೊಳಗಾದವರು ಎಂದು ಅಲ್ಲಿಯ ಮಾಜಿ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಶೇ 32ರಷ್ಟು ಬಾಲಕಿಯರು ಅತ್ಯಾಚಾರಕ್ಕೆ ತುತ್ತಾಗುತ್ತಿದ್ದಾರೆ. ಶೇ 50ರಷ್ಟು ಬಾಲಕಿಯರ ಮರಣ ಕಾನೂನು ಬಾಹಿರ ಗರ್ಭಪಾತದಿಂದ ಸಂಭವಿಸುತ್ತಿದೆ. ಗರ್ಭಿಣಿಯರಾದ ಶೇ 72ರಷ್ಟು ಬಾಲಕಿಯರು ಶಾಲೆಯನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !