ಶನಿವಾರ, 2–4–1994

ಸೋಮವಾರ, ಏಪ್ರಿಲ್ 22, 2019
32 °C
1994

ಶನಿವಾರ, 2–4–1994

Published:
Updated:

‘ರಾಷ್ಟ್ರಪಿತ ಗೌರವಕ್ಕೆ ಗಾಂಧೀಜಿ ಅರ್ಹರಲ್ಲ’

ಅಹ್ಮದಾಬಾದ್, ಏ. 1 (ಪಿಟಿಐ)– ಬಹುಜನ ಸಮಾಜ ಪಕ್ಷವು ಕೇಂದ್ರದಲ್ಲಿ ಆಡಳಿತಕ್ಕೆ ಬಂದರೆ ಗಾಂಧೀಜಿ ಅವರು ‘ರಾಷ್ಟ್ರಪಿತ’ ಸ್ಥಾನವನ್ನು ಕಳೆದುಕೊಳ್ಳುವರು ಎಂದು ಪಕ್ಷದ ಅಧ್ಯಕ್ಷ ಕಾನ್ಷಿರಾಂ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ‘ಗಾಂಧೀಜಿಯವರನ್ನು ನಾವು ಗೌರವಿಸುತ್ತೇವೆ. ಆದರೆ ಅವರನ್ನು ರಾಷ್ಟ್ರಪಿತ ಎಂದು ಪರಿಗಣಿಸಬೇಕೆಂದು ಸಂವಿಧಾನದಲ್ಲೇನೂ ನಿರೂಪಿಸಿಲ್ಲ. ಅವರನ್ನು ಬ್ರಾಹ್ಮಣರನ್ನು ಎತ್ತಿಕಟ್ಟಿದವರು ಎಂದೇ ಪರಿಗಣಿಸಲಾಗುವುದು’ ಎಂದರು.

‘ಗಾಂಧೀಜಿಯವರು ಬ್ರಾಹ್ಮಣರಿಗೆ ಅಗ್ರಪಟ್ಟ ನೀಡಲು ಶ್ರಮಿಸಿದರು. ಪರಿಣಾಮ ರಾಷ್ಟ್ರಪತಿ, ಪ್ರಧಾನಿ, ಮುಖ್ಯ ಚುನಾವಣಾ ಆಯುಕ್ತ ಎಲ್ಲರೂ ಬ್ರಾಹ್ಮಣರೇ. ಅವರನ್ನು ಬ್ರಾಹ್ಮಣರು ಮಾತ್ರ ಪೂಜಿಸಬಹುದು. ಆದರೆ ಆ ಅವಧಿಯಲ್ಲಿ ಹರಿಜನರ ಮೇಲೆ ಎಸಗಲಾಗುತ್ತಿರುವ ದೌರ್ಜನ್ಯ ಕೊನೆಗೊಳಿಸಲು ನಮ್ಮ ಪೂರ್ವಜರು ಹೋರಾಟ ನಡೆಸುತ್ತಿದ್ದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ’ ಎಂದು ನುಡಿದರು.

ಮಹಿಳೆ ಶಿಲುಬೆಗೆ

ಕಪಿತಂಗನ್ (ಫಿಲಿಪ್ಪೀನ್ಸ್)– ಏ. 1– ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿ ಕೊಂದ ದಿನದ ಸ್ಮರಣೆಗಾಗಿ ಇಂದು ನಡೆದ ಹಲವು ಶಾಸ್ತ್ರಗಳ ಪೈಕಿ ಒಂದರಲ್ಲಿ ಶ್ರದ್ಧಾ ಚಿಕಿತ್ಸಕಿಯಾದ 53 ವರ್ಷ ಪ್ರಾಯದ ಮಹಿಳೆಯೊಬ್ಬಳನ್ನು ಶಿಲುಬೆಗೆ ಏರಿಸಿ ಮೊಳೆ ಹೊಡೆಯಲಾಯಿತು.

ಸುಮಾರು ಎರಡು ಸಾವಿರ ಮಂದಿ ನೋಡುತ್ತಿದ್ದಂತೆ ಮದರ್ ಪ್ಯಾರಿಂಗ್ ಎಂಬ ಈಕೆ ತನ್ನ ಕಿವಿಯೋಲೆ ಮತ್ತು ಉಂಗುರಗಳನ್ನು ತೆಗೆದಿರಿಸಿ ಶಿಲುಬೆಯೊಂದಕ್ಕೆ ತನ್ನ ಕೈಗಳನ್ನು ಹಿಡಿದಳು. ಬೆಂಬಲಿಗರು ಇಬ್ಬರು ಆಕೆಯ ಕಾಲು ಮತ್ತು ಕೈಗಳಿಗೆ ಮೊಳೆ
ಗಳನ್ನು ಹೊಡೆದರು. ಸುಮಾರು 15 ನಿಮಿಷಗಳ ಕಾಲ ಶಿಲುಬೆಯಲ್ಲಿದ್ದ ಈಕೆ ನೆರೆದಿದ್ದ ಜನರೆಡೆಗೆ ಆಗಾಗ ಮುಗುಳ್ನಗೆ ಬೀರುತ್ತಿದ್ದಳು. ‘ಜೀಸಸ್‌ನ ಶಕ್ತಿ ಅವಳನ್ನು ಆವರಿಸಿಕೊಂಡಿದೆ’ ಎಂದು ಅವಳು ನಗುವಾಗ ಜನರು ಮಾತನಾಡಿಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !