ಬುಧವಾರ, 6–4–1994

ಗುರುವಾರ , ಏಪ್ರಿಲ್ 25, 2019
31 °C
ಬುಧವಾರ

ಬುಧವಾರ, 6–4–1994

Published:
Updated:

ಡಂಕೆಲ್ ವಿರೋಧಿ ರ್‍ಯಾಲಿ ಹಿಂಸಾತ್ಮಕ

ನವದೆಹಲಿ, ಏ. 5 (ಪಿಟಿಐ, ಯುಎನ್‌ಐ)– ಡಂಕೆಲ್ ಪ್ರಸ್ತಾವ ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಎಡಪ‍ಕ್ಷಗಳ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಇಂದು ಬೆಳಿಗ್ಗೆ ಇಲ್ಲಿನ ರಾಜಘಾಟ್ ಬಳಿ ಸುಮಾರು ಮೂರು ತಾಸಿಗೂ ಹೆಚ್ಚು ಕಾಲ ಬೀದಿ ಕಾಳಗ ನಡೆದು, ಸುಮಾರು ಇನ್ನೂರು ಮಂದಿ ಗಾಯಗೊಂಡರು.

ಎಡಪಕ್ಷಗಳು ಈ ರ್‍ಯಾಲಿಯನ್ನು ಸಂಘಟಿಸಿದ್ದವು. ಹಿಂಸಾಚಾರಕ್ಕಿಳಿದ ಉದ್ರಿಕ್ತ ಪ್ರದರ್ಶನಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ, ಅಶ್ರುವಾಯು ಮತ್ತು ನೀರಿನ ಪಿಚಕಾರಿ ಪ್ರಯೋಗಿಸಿದರು. ನಂತರ ಪೊಲೀಸರು ಬಲಪ್ರಯೋಗಿಸಿ ಅವರನ್ನೆಲ್ಲ ತೆರವು ಮಾಡಬೇಕಾಯಿತು.

ಮುಲಾಯಂ ಹತ್ಯೆ ಯತ್ನ– ಬಿಜೆಪಿ ಕೈವಾಡ ಇಲ್ಲ

ನವದೆಹಲಿ, ಏ. 5 (ಪಿಟಿಐ)– ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಹತ್ಯೆ ಯತ್ನದಲ್ಲಿ ಬಿಜೆಪಿ ಕೈವಾಡ ಇದೆ ಎಂಬ ಆರೋಪವನ್ನು ಪಕ್ಷವು ಸ್ಪಷ್ಟವಾಗಿ ನಿರಾಕರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !