ಭಾನುವಾರ, 24–4–1994

ಸೋಮವಾರ, ಮೇ 20, 2019
33 °C
ಭಾನುವಾರ

ಭಾನುವಾರ, 24–4–1994

Published:
Updated:

ಗಡಿಯಲ್ಲಿ ಶಾಂತಿ ಪಾಲನೆ: ಭಾರತ–ಚೀನಾ ಒಪ್ಪಂದ

ನವದೆಹಲಿ, ಏ. 23 (ಯುಎನ್‌ಐ, ಪಿಟಿಐ)– ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾಗಳು ಒಪ್ಪಂದವೊಂದಕ್ಕೆ ಬಂದಿವೆ. ಪರಸ್ಪರ ವಿಶ್ವಾಸ ಹೆಚ್ಚಿಸಿಕೊಳ್ಳುವಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ವರ್ಣಿಸಲಾಗಿದೆ.

ಬೀಜಿಂಗ್‌ನಲ್ಲಿ ಎರಡು ದಿನಗಳ ಕಾಲ ಸಭೆ ನಡೆಸಿದ ಎರಡೂ ದೇಶಗಳ ರಾಜತಾಂತ್ರಿಕ ಹಾಗೂ ಮಿಲಿಟರಿ ತಜ್ಞರ ತಂಡದ ಪ್ರತಿನಿಧಿಗಳು ಶುಕ್ರವಾರ ರಾತ್ರಿ ಈ ಒಪ್ಪಂದದ ಕಾಗದ ಪತ್ರಗಳಿಗೆ ಅಂಕಿತ ಹಾಕಿದರು.

ಬೀಜಿಂಗ್ ವರದಿ: ಉಭಯ ದೇಶಗಳ ವಾಸ್ತವ ಗಡಿ ನಿಯಂತ್ರಣ ರೇಖೆಯ ಅರ್ಥ ವ್ಯಾಖ್ಯಾನ, ಸೈನ್ಯಪಡೆ ಸಂಖ್ಯೆ ಖೋತಾ– ಈ ಮೊದಲಾದ ವಿಶ್ವಾಸ ಹೆಚ್ಚಿಸುವ ಕ್ರಮಗಳ ಸಂಬಂಧದಲ್ಲಿಯೂ ಒಪ್ಪಂದ ಏರ್ಪಟ್ಟಿತು.

ಅಮೆರಿಕ ಮಾಜಿ ಅಧ್ಯಕ್ಷ ನಿಕ್ಸನ್ ನಿಧನ

ನ್ಯೂಯಾರ್ಕ್, ಏ. 23 (ಯುಎನ್ಐ, ಪಿಟಿಐ)– ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ (81) ಅವರು ನಿನ್ನೆ ರಾತ್ರಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ನಾಲ್ಕು ದಿನಗಳ ಹಿಂದೆ ಪಾರ್ಶ್ವವಾಯುಗೆ ಅವರು ಒಳಗಾಗಿದ್ದರು. ಗುರುವಾರದಿಂದ ಪ್ರಜ್ಞಾಹೀನಾವಸ್ಥೆಯಲ್ಲಿದ್ದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !