ಬುಧವಾರ, 18–5–1994

ಗುರುವಾರ , ಮೇ 23, 2019
31 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಬುಧವಾರ,

ಬುಧವಾರ, 18–5–1994

Published:
Updated:

ಭ್ರಷ್ಟಾಚಾರಕ್ಕೆ ತಡೆ: ನಾಲ್ಕೂ ವಿಭಾಗಕ್ಕೆ ಜಾಗೃತ ದಳ

ಬೆಂಗಳೂರು, ಮೇ 17– ಸರ್ಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಲಿ ಪ್ರಾಧಿಕಾರಗಳಲ್ಲಿ ಹಾಗೂ ಸರ್ಕಾರಕ್ಕೆ ನೇರವಾಗಿ ಸಂಬಂಧಿಸಿದ ಇಲಾಖೆಗಳಲ್ಲಿನ ಭ್ರಷ್ಟಾಚಾರ ಅವ್ಯವಹಾರಗಳ ಬಗ್ಗೆ ಶೀಘ್ರಗತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನೆರವಾಗಲು ನಾಲ್ಕು ಕಂದಾಯ ವಿಭಾಗಗಳಲ್ಲಿ ಜಾಗೃತ ದಳಗಳನ್ನು ರಚಿಸಲು ಇಂದು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

‘ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಯಾವುದೇ ದೂರುಗಳು ಬಂದಲ್ಲಿ, ಅವುಗಳನ್ನೆಲ್ಲ ಕಂಪ್ಯೂಟರ್‌ಗಳಲ್ಲಿ ಸಂಗ್ರಹಿಸಿ ತಕ್ಷಣ ಕ್ರಮ ತೆಗೆದುಕೊಂಡು ಅವಕ್ಕೆ ತಡೆ ಹಾಕುವುದು ಮುಖ್ಯ ಉದ್ದೇಶ. ತನಿಖೆ ಶೀಘ್ರ ಗತಿಯಲ್ಲಿ ನಡೆಯುವಂತಾಗಲು ಎರಡು ತನಿಖಾ ಘಟಕಗಳನ್ನು ತೆರೆಯಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ತಿಳಿಸಿದರು.

ಲಿಂಬೂ: ಸಿಕ್ಕಿಂ ನೂತನ ಮುಖ್ಯಮಂತ್ರಿ

ಗ್ಯಾಂಗ್ಟಕ್, ಮೇ 17 (ಯುಎನ್‌ಐ, ಪಿಟಿಐ)– ಸಿಕ್ಕಿಂ ಮುಖ್ಯಮಂತ್ರಿ ನರಬಹಾದೂರ್ ಭಂಡಾರಿ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸಲು ವಿಫಲರಾದರು. ಭಿನ್ನಮತೀಯ ನಾಯಕ ಸಂಚಾಮನ್ ಲಿಂಬೂ ಅವರು ನಾಳೆ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಐದು ವರ್ಷಗಳ ಅಧಿಕಾರಾವಧಿಯ ಕೊನೆಯ ಹಂತದಲ್ಲಿ ಭಂಡಾರಿ ಅವರು ವಿಶ್ವಾಸ ಮತ ಕಳೆದುಕೊಂಡು ರಾಜೀನಾಮೆ ನೀಡಿದ ನಂತರ ರಾಜ್ಯಪಾಲ ಆರ್.ಎಚ್. ತಹಿಲಿಯಾನಿ ಅವರು ಲಿಂಬೂ ಅವರಿಗೆ ಸರ್ಕಾರ ರಚಿಸುವಂತೆ ಇಂದು ರಾತ್ರಿ ಆಹ್ವಾನ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !