ಬುಧವಾರ, 8–6–1994

ಶುಕ್ರವಾರ, ಜೂನ್ 21, 2019
22 °C
1994

ಬುಧವಾರ, 8–6–1994

Published:
Updated:

ಸಾಲಿಗ್ರಾಮದ ಬಳಿ ದುರಂತ: ಲಾರಿ ಉರುಳಿ ದಿಬ್ಬಣದ 11 ಮಂದಿ ಸಾವು

ಮೈಸೂರು, ಜೂನ್ 7– ಬೀಗರ ಊಟ ಮುಗಿಸಿ ವಾಪಸಾಗುತ್ತಿದ್ದ ಮದುವೆ ತಂಡದ ಲಾರಿಯೊಂದು ಮಗುಚಿ ಬಿದ್ದು ಕನಿಷ್ಠ 11 ಮಂದಿ ಸಾವಿಗೀಡಾದ ಅಪಘಾತ ಕೃಷ್ಣರಾಜನಗರ ತಾಲ್ಲೂಕಿನ ಸಾಲಿಗ್ರಾಮ ಠಾಣೆ ವ್ಯಾಪ್ತಿಯ ಮುಂಜನಹಳ್ಳಿ ಬಳಿ ಇಂದು ಸಂಜೆ 4.30ರ ಸುಮಾರಿಗೆ ಸಂಭವಿಸಿದೆ.

ಕೋಲಾರ ಗೋಲಿಬಾರ್ ನ್ಯಾಯಾಂಗ ತನಿಖೆ– ಮೊಯಿಲಿ ಭರವಸೆ

ಕೋಲಾರ, ಜೂನ್ 7– ಕೋಲಾರದಲ್ಲಿ ನಿನ್ನೆ ಪ್ರದರ್ಶನ ನಡೆಸಿದ ರೈತರ ಮೇಲೆ ಪೊಲೀಸರು ಗೋಲಿಬಾರ್ ಮಾಡಿದ ಘಟನೆಯ ಬಗ್ಗೆ ನ್ಯಾಯಾಂಗ ತನಿಗೆ ನಡೆಸುವುದಾಗಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಂದು ಪ್ರಕಟಿಸಿದರು.

ರೋರಿಚ್ ಆಸ್ತಿ ವಶ ವಿಳಂಬ: ರಷ್ಯ ಅತೃಪ್ತಿ

ಬೆಂಗಳೂರು, ಜೂನ್ 7– ಖ್ಯಾತ ಕಲಾವಿದ ರೋರಿಚ್ ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮೀನ– ಮೇಷ ಎಣಿಸುತ್ತಿರುವ ಬಗ್ಗೆ ರಷ್ಯ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ಬೆಂಗಳೂರಿಗೆ ಇತ್ತೀಚೆಗೆ ಭೇಟಿ ನೀಡಿದ್ದ ರಷ್ಯದ ಉಪ ಪ್ರಧಾನಿ ಯೂರಿಫ್ ಯಾನೊವ್, ಅವರ ಪ‍ತ್ನಿ ಯೂರೊವ್, ರಷ್ಯದ ರಾಯಭಾರಿ ಡ್ರುಕೊವ್ ಹಾಗೂ ಮದರಾಸಿನಲ್ಲಿ ರಷ್ಯದ ಕೌನ್ಸಿಲ್ ಜನರಲ್ ಆಗಿರುವ ಮೈಖೇಲ್ ಬಾಂಡರೆಖೊವ್ ಅವರು ರಾಜ್ಯ ಸರ್ಕಾರಕ್ಕೆ ತಮ್ಮ ಅತೃಪ್ತಿಯನ್ನು ಸೂಚಿಸಿದರು. ಈ ಸಂಬಂಧ ತನಿಖೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !