ಶುಕ್ರವಾರ, ಆಗಸ್ಟ್ 23, 2019
22 °C
ಬುಧವಾರ

ಬುಧವಾರ, 10–8–1994

Published:
Updated:

ಧ್ವಜ ವಿವಾದ– 35 ಬಿಜೆಪಿ ಸದಸ್ಯರ ಬಂಧನ

ಹುಬ್ಬಳ್ಳಿ, ಆ. 9– ಹುಬ್ಬಳ್ಳಿಯ ಕಿತ್ತೂರ ಚೆನ್ನಮ್ಮ– ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಾರಿಸುವ ವಿವಾದದ ಹಿನ್ನೆಲೆಯಲ್ಲಿ ಹುಬ್ಬಳ್ಳಿ– ಧಾರವಾಡ ಪೊಲೀಸರು ಭಾರತೀಯ ಜನತಾ ಪಕ್ಷದ ನಾಯಕರ ಬಂಧನ ಕಾರ್ಯಾಚರಣೆಯನ್ನು ಇಂದು ನಸುಕಿನಲ್ಲಿ ಆರಂಭಿಸಿದ್ದು, ಧ್ವಜಾರೋಹಣ ವಿವಾದದ ಬಿಸಿ ತೀವ್ರಗೊಳ್ಳತೊಡಗಿದೆ. ಒಟ್ಟು 35 ಮಂದಿಯನ್ನು ಬಂಧಿಸಲಾಗಿದೆ.

ಸಹಕಾರಿ ರಂಗದ ಧುರೀಣ ಎಸ್.ಎಫ್. ಪಾಟೀಲ್ ನಿಧನ

ಬೆಂಗಳೂರು, ಆ. 9– ಧಾರವಾಡ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಹಕಾರ ಚಳವಳಿಯ ಹಿರಿಯ ಧುರೀಣ ಸಿದ್ಧನಗೌಡ ಫಕೀರಗೌಡ ಪಾಟೀಲ್ ಅವರು ನಗರದ ಆಸ್ಪತ್ರೆಯೊಂದರಲ್ಲಿ ಇಂದು ಬೆಳಿಗ್ಗೆ ನಿಧನರಾದರು.

Post Comments (+)