ಬುಧವಾರ, ನವೆಂಬರ್ 20, 2019
27 °C
ಬುಧವಾರ

ಬುಧವಾರ, 19–10–1994

Published:
Updated:

ಉಪಗ್ರಹ ಉಡಾವಣೆ: ಅಮೆರಿಕ ಮೌನ

ವಾಷಿಂಗ್ಟನ್, ಅ. 18 (ಪಿಟಿಐ)– ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಬಗ್ಗೆ ಮುಂದಾಗಿಯೇ ಪ್ರತಿಕ್ರಿಯೆ ವ್ಯಕ್ತಪ‍ಡಿಸುವ ಅಮೆರಿಕವು, ಇತ್ತೀಚೆಗೆ ಭಾರತ ಪೋಲಾರ್ ಉಪಗ್ರಹವನ್ನು ಯಶಸ್ವಿಯಾಗಿ ಹಾರಿಬಿಡುವ ಮೂಲಕ ವಾಣಿಜ್ಯ ಉಪ ಗ್ರಹಗಳ ಉಡಾವಣಾ ಸಾಮರ್ಥ್ಯ ಪಡೆದ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಸೇರಿರು ವುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತ
ಪಡಿಸಲು ನಿರಾಕರಿಸಿದೆ.

ಪೂರ್ಣ ಶಾಂತಿಯುತ ಉದ್ದೇಶದ ಈ ಘಟನೆ ಬಗ್ಗೆ ಮಾತನಾಡುವುದು ಅಮೆರಿಕದ ಅಧಿಕಾರಿಗಳಿಗೆ ಧರ್ಮ ಸಂಕಟದ ಸಂಗತಿಯಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಧೂಮಪಾನ– ಸಾವು

ನವದೆಹಲಿ, ಅ. 18 (ಯುಎನ್‌ಐ)– ಧೂಮಪಾನದಿಂದ 25 ನಮೂನೆಯ ಮಾರಣಾಂತಿಕ ವ್ಯಾಧಿಗಳು ಬರುತ್ತವೆ; ಆದರೆ ದಿನಕ್ಕೆ ಒಂದು ಅಥವಾ ಎರಡು ಪೆಗ್ ಮದ್ಯಪಾನ ಮಾಡಿದರೆ ಅದರಿಂದ ಹಾನಿಗಿಂತ ಲಾಭವೇ ಹೆಚ್ಚು ಎಂದು ಧೂಮಪಾನ-ಮದ್ಯಪಾನದ ಬಗ್ಗೆ ನಡೆದ ಅಧ್ಯಯನದಿಂದ ತಿಳಿದುಬಂದಿದೆ.

ಪ್ರತಿಕ್ರಿಯಿಸಿ (+)