ಭಾನುವಾರ, 16–1–1994

7

ಭಾನುವಾರ, 16–1–1994

Published:
Updated:

ಮೊಯಿಲಿ ಸ್ಥಾನಕ್ಕೆ ಚ್ಯುತಿ ಇಲ್ಲ – ‘ಕುಟುಂಬ ಹಿರಿಯ’

ನವದೆಹಲಿ, ಜ. 15– ವೀರಪ್ಪ ಮೊಯಿಲಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಸದ್ಯಕ್ಕಂತೂ ಬಹುತೇಕ ಖಚಿತ. ಪಕ್ಷದ ಎಲ್ಲ ಶಾಸಕರನ್ನು ಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು ಕುಟುಂಬದ ಯಜಮಾನನಂತೆ ಮುನ್ನಡೆಯಲು ಆದೇಶ.

ಮುಂದೂಡಿರುವ ವಿಧಾನ ಮಂಡಲ ಅಧಿವೇಶನ ಸೋಮವಾರದಿಂದ ಭಿನ್ನಮತೀಯರಿಂದ ಯಾವ ಅಡೆ ತಡೆ ಇಲ್ಲದೇ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಡಾ. ಜಗನ್ನಾಥ್ ಮಿಶ್ರಾ ನಾಳೆ ಮತ್ತೆ ಬೆಂಗಳೂರಿಗೆ ವೀಕ್ಷಕರಾಗಿ ಭೇಟಿ. ಇವಿಷ್ಟು ಇಂದಿನ ಪ್ರಮುಖ ಬೆಳವಣಿಗೆ.

3 ಜಲ ವಿದ್ಯುತ್ ಯೋಜನೆ ಖಾಸಗಿ

ರಾಯಚೂರು, ಜ. 15– ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಇದುವರೆಗೆ ಒಟ್ಟು 256 ಕೋಟಿ ರೂಪಾಯಿ ವೆಚ್ಚ ಮಾಡಿ ಶೇಕಡಾ 20ರಿಂದ 50ರಷ್ಟು ಸಿವಿಲ್ ಕಾಮಗಾರಿಯನ್ನು ಮುಗಿಸಿರುವ ಮೂರು ಜಲ ವಿದ್ಯುತ್ ಯೋಜನೆಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲು ಸರ್ಕಾರ ತೀರ್ಮಾನಿಸಿದ್ದು ಈ ವಿಧಾನ ಮಂಡಲ ಅಧಿವೇಶನ ಮುಗಿದ ಕೂಡಲೇ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ ಎಂದು ನಿಗಮದ ಮೂಲಗಳಿಂದ ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !