ಮಂಗಳವಾರ, ನವೆಂಬರ್ 12, 2019
28 °C

ಉತ್ತೀರ್ಣರಲ್ಲಿ ಪ್ರಮುಖರ ಬಂಧುಗಳೇ ಹೆಚ್ಚು

Published:
Updated:

ಉತ್ತೀರ್ಣರಲ್ಲಿ ಪ್ರಮುಖರ ಬಂಧುಗಳೇ ಹೆಚ್ಚು

ಬೆಂಗಳೂರು, ಸೆ. 4– ರಾಜ್ಯ ಲೋಕಸೇವಾ ಆಯೋಗದ ‘ಎ’ ಮತ್ತು ‘ಬಿ’ ಗುಂಪಿನ ಗೆಜೆಟೆಡ್ ಪ್ರೊಬೇಷನರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಶೇಕಡ 50ರಷ್ಟು ಮಂದಿ ರಾಜ್ಯದ ಮಂತ್ರಿ, ಶಾಸಕರು, ಉನ್ನತಾಧಿಕಾರಿಗಳು ಹಾಗೂ ಆಯೋಗದ ಪ್ರಮುಖರ ಮಕ್ಕಳು, ಅಳಿಯ ಮತ್ತಿತರ ಬಂಧುಗಳು ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

‘ಉತ್ತರ ಪತ್ರಿಕೆಗಳನ್ನು ಮನೆಗೇ ಕೊಂಡೊಯ್ದು ಹೆಚ್ಚುವರಿ ಹಾಳೆಗಳನ್ನು ಸೇರಿಸುವ ಭಾರೀ ಅವ್ಯವಹಾರ ನಡೆದಿದೆ’ ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಗರ್ಭಪಾತ ಹಕ್ಕಿಗೆ ಭಾರತದ ಬೆಂಬಲ

ನವದೆಹಲಿ, ಸೆ. 4 (ಪಿಟಿಐ)– ನಾಳೆ ಕೈರೋದಲ್ಲಿ ಪ್ರಾರಂಭವಾಗಲಿರುವ ‘ಜನಸಂಖ್ಯೆ ಹತೋಟಿ ಹಾಗೂ ಅಭಿವೃದ್ಧಿ’ಗೆ ಸಂಬಂಧಿಸಿದ ವಿಶ್ವ ಸಮಾವೇಶದಲ್ಲಿ, ಗರ್ಭಪಾತದ ಹಕ್ಕನ್ನು ವಿರೋಧಿಸುವವರ ಜತೆ ಭಾರತ ಘರ್ಷಣೆಗೆ ಇಳಿಯುವುದು ಖಚಿತವಾಗಿದೆ.

ಪ್ರತಿಕ್ರಿಯಿಸಿ (+)