ಸೋಮವಾರ, 4–4–1994

ಸೋಮವಾರ, ಏಪ್ರಿಲ್ 22, 2019
32 °C
ಸೋಮವಾರ

ಸೋಮವಾರ, 4–4–1994

Published:
Updated:

ರಾಷ್ಟ್ರಪತಿ ಆದೇಶ: ಗೋವಾ ರಾಜ್ಯಪಾಲರ ರಾಜೀನಾಮೆ

ನವದೆಹಲಿ, ಏ. 3 (ಪಿಟಿಐ, ಯುಎನ್‌ಐ)– ಗೋವಾ ಮುಖ್ಯಮಂತ್ರಿ ಪದವಿಯಿಂದ ವಿಲ್ಫ್ರೆಡ್‌ ಡಿಸೋಜಾ ಅವರನ್ನು ಹಠಾತ್ತನೆ ವಜಾ ಮಾಡಿ ರವಿ ನಾಯಕ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೇಮಿಸಿ ಭಾರೀ ವಿವಾದ ಎಬ್ಬಿಸಿದ ರಾಜ್ಯಪಾಲ ಭಾನುಪ್ರಕಾಶ್ ಸಿಂಗ್ ಅವರು ರಾಷ್ಟ್ರಪತಿ ಶಂಕರ ದಯಾಳ್ ಶರ್ಮಾ ಅವರ ಆದೇಶದ ಮೇರೆಗೆ ಇಂದು ರಾಜೀನಾಮೆ ನೀಡಿದರು.

ಇಂದು ಬೆಳಿಗ್ಗೆ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ಗೋವಾ ವಿದ್ಯಮಾನ ಕುರಿತು ಶರ್ಮಾ ಅವರೊಡನೆ ಒಂದು ಗಂಟೆ ಕಾಲ ಚರ್ಚಿಸಿದ ಬಳಿಕ ಭಾನುಪ್ರಕಾಶ್ ಸಿಂಗ್ ಅವರಿಗೆ ರಾಜೀನಾಮೆ ನೀಡುವಂತೆ ರಾಷ್ಟ್ರಪತಿ ತಿಳಿಸಿದರು. ಆನಂತರ ಸಿಂಗ್ ಅವರು ತಮ್ಮ ರಾಜೀನಾಮೆಯನ್ನು ರವಾನಿಸಿದರು.

ಪಾಕ್‌ ಕವಿ ಕರೆ

ನವದೆಹಲಿ, ಏ. 3 (ಯುಎನ್‌ಐ)– ಭಾರತ ಮತ್ತು ಪಾಕಿಸ್ತಾನದ ನಡುವಿನ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯ ಸಂಬಂಧಗಳನ್ನು ಎತ್ತಿ ಹಿಡಿಯುವ ಮೂಲಕ ಎರಡೂ ರಾಷ್ಟ್ರಗಳ ಮಧ್ಯೆ ಉತ್ತಮ ಬಾಂಧವ್ಯ ಮೂಡುವಂತೆ ಮಾಡಬೇಕು ಎಂದು ಕಲಾಕಾರರು ಮತ್ತು ಸಾಹಿತಿಗಳಿಗೆ ಪ್ರಖ್ಯಾತ ಕವಿ ಖತೀಲ್‌ ಶಿಫಾಯಿ ಇಂದು ಇಲ್ಲಿ ಕರೆ ನೀಡಿದರು.

ದೆಹಲಿಯ ಗೀತಾ ಠಾಕೂರ್ ಅವರು ರಚಿಸಿದ ಉರ್ದು ಕಾವ್ಯದ ಪುಸ್ತಕದ ಬಿಡುಗಡೆ ವೇಳೆ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !