ರಾಜ್ಯ ಕಾಂಗೈ ಬಿಕ್ಕಟ್ಟು ಇತ್ಯರ್ಥಕ್ಕೆ ಶೀಘ್ರವೇ ಹೈಕಮಾಂಡ್‌ ಪ್ರತಿನಿಧಿ

7

ರಾಜ್ಯ ಕಾಂಗೈ ಬಿಕ್ಕಟ್ಟು ಇತ್ಯರ್ಥಕ್ಕೆ ಶೀಘ್ರವೇ ಹೈಕಮಾಂಡ್‌ ಪ್ರತಿನಿಧಿ

Published:
Updated:
Deccan Herald

ನವದೆಹಲಿ, ನ. 3– ಮುಖ್ಯಮಂತ್ರಿ ಸ್ಥಾನದಿಂದ ಎಂ. ವೀರಪ್ಪ ಮೊಯಿಲಿ ಅವರನ್ನು ತೆಗೆದು ಹಾಕಬೇಕೆಂಬ ಭಿನ್ನಮತೀಯರ ಬೇಡಿಕೆಯಿಂದ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್‌–ಐ ಅಧ್ಯಕ್ಷ ಪಿ.ವಿ. ನರಸಿಂಹ ರಾವ್‌ ಅವರು ಹಿರಿಯ ನಾಯಕರೊಬ್ಬರನ್ನು ಕರ್ನಾಟಕಕ್ಕೆ ಶೀಘ್ರದಲ್ಲೇ ಕಳುಹಿಸಲಿದ್ದಾರೆ.

ಉಭಯ ಬಣಗಳಲ್ಲಿ ಮಿಂಚಿನ ಸಂಚಾರ

ಬೆಂಗಳೂರು, ನ. 3– ಆಡಳಿತ ಪಕ್ಷದ ಆಂತರಿಕ ಬಿಕ್ಕಟ್ಟನ್ನು ಬಗೆಹರಿಸಲು ಕೆಲವೇ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರನ್ನು ನಗರಕ್ಕೆ ಕಳುಹಿಸುವುದಾಗಿ ಎಐಸಿಸಿ ವಕ್ತಾರ ವಿ.ಎನ್‌. ಗಾಡ್ಗೀಳ್‌ ಅವರು ಇಂದು ದೆಹಲಿಯಲ್ಲಿ ಪ್ರಕಟಿಸಿರುವ ಸುದ್ದಿ ಇಲ್ಲಿನ ಭಿನ್ನಮತೀಯರು ಮತ್ತು ನಿಷ್ಠರ ಗುಂಪಿನಲ್ಲಿ ಮಿಂಚಿನ ಸಂಚಾರ ಉಂಟುಮಾಡಿದೆ.

ನಾಳೆ ದೆಹಲಿಗೆ ತೆರಳಬೇಕಾಗಿದ್ದ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರಲ್ಲದೆ ಉಪ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರೂ ಸಂಪುಟ ಸಭೆ ಮುಗಿಸಿಕೊಂಡು ಇಂದು ರಾತ್ರಿಯೇ ದಿಢೀರನೆ ದೆಹಲಿಗೆ ತೆರಳಿದರು.

ಷರೀಫ್‌ ಪ್ರಕರಣ: ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ

ಬೆಂಗಳೂರು, ನ. 3– ಕೇಂದ್ರ ರೈಲ್ವೆ ಸಚಿವ ಜಾಫರ್‌ ಷರೀಫ್‌ ಅವರ ವಿರುದ್ಧ ಬಂದಿರುವ ಭೂ ಹಗರಣ ಆಪಾದನೆಗಳ ಸಂಬಂಧದಲ್ಲಿ ಸಭೆಯ ಮುಂದಿಡಲಾದ ದಾಖಲೆಗಳ ಬಗೆಗೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲು ಇಂದು ನಡೆದ ಸಂಪುಟ ಸಭೆ ನಿರ್ಧರಿಸಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !