ಗುರುವಾರ, 2–12–1993

7

ಗುರುವಾರ, 2–12–1993

Published:
Updated:

ಮಧ್ಯಪ್ರದೇಶ: ಬಿಜೆಪಿ ಕೋಟೆ ಧ್ವಂಸ; ಕಾಂಗೈ ಬಹುಮತ ನಿಚ್ಚಳ
ನವದೆಹಲಿ, ಡಿ. 1–
ಬಿಜೆಪಿಯ ಇನ್ನೊಂದು ಭದ್ರಕೋಟೆಯಾದ ಮಧ್ಯಪ್ರದೇಶ ಇಂದು ಕಾಂಗೈ ವಶವಾಯಿತು. ಚುನಾವಣೆ ನಡೆದ ಎಲ್ಲ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು ಕಾಂಗೈ 173 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿ ನಿಚ್ಚಳ ಬಹುಮತ ಪಡೆದಿದೆ. ಬಿಜೆಪಿಗೆ 114 ಸ್ಥಾನ ಮಾತ್ರ ಲಭಿಸಿದೆ.

ಬಂಗಾರಪ್ಪ ವಿರುದ್ಧ ತಕ್ಷಣ ಕ್ರಮಕ್ಕೆ ಸಚಿವರ ಒತ್ತಾಯ
ಬೆಂಗಳೂರು, ಡಿ. 1–
ಅಯೋಧ್ಯೆಯಲ್ಲಿ ಮಸೀದಿ ರಕ್ಷಿಸದೇ ಹೋದುದಕ್ಕೆ ಕಾಂಗ್ರೆಸ್‌ ಪಕ್ಷ ಹಾಗೂ ಸರ್ಕಾರ ಅಲ್ಪಸಂಖ್ಯಾತರ ಕ್ಷಮೆ ಕೇಳಬೇಕು ಎಂದು ಹೇಳುವ ಮೂಲಕ ಮೇಲ್ನೋಟಕ್ಕೇ ಅಶಿಸ್ತಿನ ಅಪರಾಧ ಮಾಡಿರುವ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರನ್ನು ತಕ್ಷಣದಲ್ಲಿಯೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಸಸ್ಪೆಂಡ್‌ ಮಾಡುವಂತೆ ನಾಲ್ವರು ಸಚಿವರು ಇಂದು ಎಐಸಿಸಿ ಅಧ್ಯಕ್ಷರೂ ಆಗಿರುವ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರನ್ನು ಒತ್ತಾಯಿಸಿದರು.

ಸಮ್ಮಿಶ್ರ ಸರ್ಕಾರ– ಬಿಜೆಪಿ ಇಂಗಿತ
ಲಖನೌ, ಡಿ. 1–
ವಿಧಾನಸಭೆಯಲ್ಲಿ 117 ಸ್ಥಾನ ಪಡೆದ ತಾನು, ಅತಿ ದೊಡ್ಡ ಪಕ್ಷವಾಗಿರುವುದರಿಂದ ಸರ್ಕಾರ ರಚಿಸಲು ತನ್ನನ್ನು ಮೊದಲು ಆಹ್ವಾನಿಸಬೇಕು ಎಂದು ಇಂದು ಒತ್ತಾಯಿಸಿದ ಬಿಜೆಪಿ, ಸಮ್ಮಿಶ್ರ ಸರ್ಕಾರ ರಚಿಸಲು ಸಿದ್ಧ ಎಂಬ ಇಂಗಿತ ವ್ಯಕ್ತಪಡಿಸಿದೆ. ಇದರಿಂದಾಗಿ ರಾಜ್ಯದ ಅಧಿಕಾರ ಸೂತ್ರ ಹಿಡಿಯಲು ಹೋರಾಟ ಇನ್ನಷ್ಟು ತೀವ್ರಗೊಂಡಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !