ಗುರುವಾರ 9–12–1993

7

ಗುರುವಾರ 9–12–1993

Published:
Updated:

ಅಡ್ವಾಣಿ ಬಂಧನಕ್ಕೆ ಬಿಜೆಪಿ ಪ್ರತಿಭಟನೆ: ಕಲಾಪ ಮುಂದಕ್ಕೆ

ನವದೆಹಲಿ, ಡಿ. 8 (ಯುಎನ್‌ಐ, ಪಿಟಿಐ) – ವಿವಾದಾತ್ಮಕ ಬಾಬರಿ ಮಸೀದಿ ನೆಲಸಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಲಖನೌದಲ್ಲಿ ಬಂಧಿಸಲಾಗಿರುವ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತಿತರ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಭಾರತೀಯಜನತಾ ಪಕ್ಷದ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದು ಯಾವುದೇ ಕಲಾಪಕ್ಕೆ ಅವಕಾಶ ನೀಡದ ಕಾರಣ ಎರಡೂ ಸದನಗಳನ್ನು ನಾಳೆಗೆ ಮುಂದೂಡಲಾಯಿತು.

ಲೋಕಸಭೆಯನ್ನು ಮೂರುಬಾರಿ ಮುಂದೂಡಿದರು ಕೂಡಾ ಬಿಜೆಪಿ ಸದಸ್ಯರು ಮತ್ತೆ ಮತ್ತೆ ಗದ್ದಲ ಹಾಕಿದ್ದರಿಂದ ಯಾವುದೇ ಕಲಾಪ ನಡೆಯಲು ಸಾಧ್ಯವಾಗಲಿಲ್ಲ.

ಭಟ್ಕಳದಲ್ಲಿ ಗೋಲಿಬಾರ್‌– ಕರ್ಫ್ಯು

ಕಾರವಾರ, ಡಿ. 8– ಭಟ್ಕಳದಲ್ಲಿ ಇಂದು ಕಲ್ಲು ತೂರಾಟ ನಡೆಸಿದ ಉದ್ರಿಕ್ತ ಜನರ ಗುಂಪನ್ನು ಚದುರಿಸಲು ಪೊಲೀಸರು ಗೋಲಿಬಾರ್‌ ಮಾಡಿದಾಗ ನಾಲ್ವರು ಗಾಯಗೊಂಡರು.

ಕಲ್ಲುತೂರಾಟದಲ್ಲಿ ಡಿಎಸ್‌ಪಿ, ಸರ್ಕಲ್‌ ಪೊಲೀಸ್‌ ಇನ್‌ಸ್ಪೆಕ್ಟರ್‌, ಸಬ್‌ಇನ್‌ಸ್ಪೆಕ್ಟರ್ ಮತ್ತು 25 ಪೊಲೀಸರು ಗಾಯಗೊಂಡಿದ್ದಾರೆ.

‘ಬಿಕ್ಕಟ್ಟು ಪರಿಹಾರಕ್ಕೆ ಆದ್ಯತೆ’

ನವದೆಹಲಿ, ಡಿ. 8– ಕರ್ನಾಟಕ ಕಾಗೈನಲ್ಲಿಯ ಬಿಕ್ಕಟ್ಟು ಪರಿಹಾರಕ್ಕೆ ತಾವು ಆದ್ಯತೆ ಮೇಲೆ ಕ್ರಮ ಕೈಗೊಳ್ಳುವುದಾಗಿ ಪ್ರಧಾನಮಂತ್ರಿ ಪಿ.ವಿ. ನರಸಿಂಹ ರಾವ್‌  ಅವರು ಇಂದು ತಮ್ಮನ್ನು ಭೇಟಿಯಾದ ಭಿನ್ನಮತೀಯ ಸಂಸತ್‌ ಸದಸ್ಯರ ನಿಯೋಗಕ್ಕೆ ಭರವಸೆ ನೀಡಿದರು.

ಮುಖ್ಯಮಂತ್ರಿ ವೀರಪ್ಪ ಮೊಯಿಲಿ ನಾಯಕತ್ವ ಬದಲಾವಣೆಗೆ ಒತ್ತಾಯಿಸಲು ಭಿನ್ನಬಣದ ಹದಿನೈದು ಸಂಸತ್‌ ಸದಸ್ಯರು ರಾವ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮೊಯಿಲಿ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಪಕ್ಷದ ವರ್ಚಸ್ಸು ಕುಸಿಯುತ್ತಿರುವುದರಿಂದ ನಾಯಕತ್ವ ಬದಲಾವಣೆಗೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಕಾಂಗೈ ಅಧ್ಯಕ್ಷರಿಗೆ ನಿಯೋಗ ತಿಳಿಸಿತು ಎಂದು ಭಿನ್ನಬಣದ ಮೂಲಗಳು ತಿಳಿಸಿವೆ.

ಮಸೀದಿ ಒಡೆಯಲು ಪ್ರಧಾನಿ ಬೆಂಬಲ

ಮಂಗಳೂರು, ಡಿ. 8– ಬಾಬರಿ ಮಸೀದಿಯನ್ನು ಒಡೆಯಲು ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರೇ ಬೆಂಬಲ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರು ನೇರ ಆಪಾದನೆ ಮಾಡಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !