ಗ್ಯಾಟ್‌ಗೆ ಸಹಿ ವಿರುದ್ಧ ಪ್ರತಿಪಕ್ಷ ಎಚ್ಚರಿಕೆ

7
ವಾರ

ಗ್ಯಾಟ್‌ಗೆ ಸಹಿ ವಿರುದ್ಧ ಪ್ರತಿಪಕ್ಷ ಎಚ್ಚರಿಕೆ

Published:
Updated:

ಗ್ಯಾಟ್‌ಗೆ ಸಹಿ ವಿರುದ್ಧ ಪ್ರತಿಪಕ್ಷ ಎಚ್ಚರಿಕೆ

ನವದೆಹಲಿ, ಡಿ. 9 (ಪಿಟಿಐ)– ಗ್ಯಾಟ್ ಒಪ್ಪಂದವನ್ನು ಈಗಿರುವ ರೀತಿಯಲ್ಲಿಯೇ ಒಪ್ಪಿಕೊಂಡು ಡಿ. 15ರೊಳಗೆ ಸಹಿ ಹಾಕುವುದು ದೇಶದ ಸಾರ್ವಭೌಮತೆಯನ್ನು ಪಾಶ್ಚಿಮಾತ್ಯ ದೇಶಗಳಿಗೆ ಒತ್ತೆಯಿಟ್ಟಂತೆ ಎಂದು ಪ್ರತಿಪಕ್ಷಗಳು ಇಂದು ಲೋಕ ಸಭೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದವು.

ಭಾರತೀಯ ಅರ್ಥ ವ್ಯವಸ್ಥೆ ಮೇಲೆ ಡಂಕೆಲ್ ಪ್ರಸ್ತಾವದ ಪರಿಣಾಮ ಕುರಿತಂತೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಸಿಪಿಎಂನ ಸೋಮನಾಥ ಚಟರ್ಜಿ ಅವರು, ಭಾರತ ಕೂಡ ಫ್ರಾನ್ಸ್ ಮತ್ತು ದಕ್ಷಿಣ ಕೋರಿಯದ ಮೇಲ್ಪಂಕ್ತಿ ಅನುಸರಿಸಿ ಒಪ್ಪಂದಕ್ಕೆ ಸಹಿ ಹಾಕಲು ವಿಳಂಬ ಮಾಡಬೇಕು ಎಂದು ಸಲಹೆ ಮಾಡಿದರು. ಈ ಬಗ್ಗೆ ಈಗಲೂ ಕಾಲ ಮಿಂಚಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರೀಡೆಗಳು

ಬೆಂಗಳೂರು, ಡಿ. 9– ಬೆಂಗಳೂರಿನಲ್ಲಿ 1995ರ ರಾಷ್ಟ್ರೀಯ ಕ್ರೀಡೆಗಳು ನಡೆಯಲಿವೆ. ಇಂದು ನಡೆದ ಭಾರತ ಒಲಿಂಪಿಕ್ ಸಂಸ್ಥೆ ಸರ್ವ ಸದಸ್ಯರ ಸಭೆಯಲ್ಲಿ ಇದನ್ನು ನಿರ್ಧರಿಸಲಾಯಿತು. ರಾಜಸ್ತಾನ ಹಾಗೂ ಅಂಧ್ರ ಪ್ರದೇಶಗಳು ಕರ್ನಾಟಕಕ್ಕೆ ಪ್ರತಿ ಸ್ಪರ್ಧಿಗಳಾಗಿದ್ದವು. ಆದರೆ ಕರ್ನಾಟಕ ಒಲಿಂಪಿಕ್ ಸಂಸ್ಥೆ ಮನವಿ ಪತ್ರದೊಂದಿಗೆ 10 ಲಕ್ಷ ರೂಪಾಯಿಗಳ ಚೆಕ್ ಅನ್ನೂ ಸಲ್ಲಿಸಿತ್ತು. ಮೊದಲಿನ ಕಾ‌ರ್ಯಕ್ರಮದ ಪ್ರಕಾರ ಈ ಕ್ರೀಡೆಗಳು ಮಣಿಪುರದಲ್ಲಿ ನಡೆಯಬೇಕಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !