ಇಸ್ಲಾಮಾಬಾದ್‌ನಲ್ಲಿ ಭಾರತ: ಪಾಕ್ ಬಿಗಿ ನಿಲುವಿನ ಮಧ್ಯೆ ಇಂದಿನಿಂದ ಚರ್ಚೆ

7
ವಾರ

ಇಸ್ಲಾಮಾಬಾದ್‌ನಲ್ಲಿ ಭಾರತ: ಪಾಕ್ ಬಿಗಿ ನಿಲುವಿನ ಮಧ್ಯೆ ಇಂದಿನಿಂದ ಚರ್ಚೆ

Published:
Updated:

ಇಸ್ಲಾಮಾಬಾದ್‌ನಲ್ಲಿ ಭಾರತ ತಂಡ: ಪಾಕ್ ಬಿಗಿ ನಿಲುವಿನ ಮಧ್ಯೆ ಇಂದಿನಿಂದ ಚರ್ಚೆ

ಇಸ್ಲಾಮಾಬಾದ್, ಜ. 1 (ಪಿಟಿಐ)– ಕಾಶ್ಮೀರ ವಿವಾದ ಮತ್ತು ಇತರ ಮಹತ್ವದ ವಿಷಯಗಳ ಕುರಿತಾಗಿ ಭಾರತ ಮತ್ತು ಪಾಕಿ
ಸ್ತಾನ ನಡುವೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ನಿರ್ಣಾಯಕ ಮಾತುಕತೆಗಳು ನಾಳೆ ಇಲ್ಲಿ ಆರಂಭಗೊಳ್ಳಲಿವೆ.

ಸಂಧಾನಗಳನ್ನು ಮುಂದುವರಿಸಬೇಕಾದರೆ ಕೆಲವೊಂದು ಷರತ್ತುಗಳನ್ನು ಒಡ್ಡಿರುವ ಪಾಕಿಸ್ತಾನದ ಬಿಗಿ ಧೋರಣೆಯ ಮಧ್ಯೆಯೂ ಈ ಮಾತುಕತೆಗಳಿಗೆ ಅತೀ ಹೆಚ್ಚಿನ ಪ್ರಾಧಾನ್ಯತೆ ಕಲ್ಪಿಸಲಾಗಿದೆ.

ಕಚ್ಚಾ ರೇಷ್ಮೆಗೆ ಸದ್ಯವೆ ಕನಿಷ್ಠ ಬೆಲೆ

ಬೆಂಗಳೂರು, ಜ. 1– ಪೂರೈಕೆ ಹಂತದಲ್ಲೇ ಕಚ್ಚಾರೇಷ್ಮೆಗೆ ಕನಿಷ್ಠ ಬೆಲೆಯನ್ನು ನಿಗದಿ ಪಡಿಸಲು ಸದ್ಯದಲ್ಲೇ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ರೇಷ್ಮೆ ಖಾತೆ ರಾಜ್ಯ ಸಚಿವ ಡಾ. ಜಿ. ಪರಮೇಶ್ವರ ಅವರು ಇಂದು ಇಲ್ಲಿ ತಿಳಿಸಿದರು.

‘ಅಗ್ನಿ’ ಪರೀಕ್ಷೆ

ಬಳಸೂರು, ಜ. 1 (ಪಿಟಿಐ) – ಭಾರತದ ಅತ್ಯಾಧುನಿಕ ಮಧ್ಯಗಾಮಿ ಕ್ಷಿಪಣಿ ‘ಆಗ್ನಿ’ ಯನ್ನು ಮೂರನೇ ಬಾರಿಗೆ ಇಲ್ಲಿಗೆ ಸಮೀಪದ ಚಂಡಿಪುರದ ಉಡಾವಣಾ ಕೇಂದ್ರದಲ್ಲಿ ಜ. 6 ಅಥವಾ 7 ರಂದು ಪರೀಕ್ಷಾರ್ಥ ಹಾರಿಸಲಾಗುವುದು.

ಬಿತ್ತನೆ ಬೀಜ ಕಾಯ್ದೆ ತಿದ್ದುಪಡಿಗೆ ಯತ್ನ

ಬೆಂಗಳೂರು, ಜ. 1– ದೇಶದ ಭದ್ರತೆಗೆ ಮಾರಕವಾದ ‘ಗ್ಯಾಟ್’ ಒಪ್ಪಂದವನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾದ ಭಾರತ ಸರ್ಕಾರ ಅದರ ಷರತ್ತುಗಳನ್ನು ಮೀರಿ ರಾಷ್ಟ್ರದ ಬಿತ್ತನೆ ಬೀಜ ಕಾನೂನನ್ನು ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ಶಾಸಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಇಂದು ಇಲ್ಲಿ ಆಪಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !