ತಬ್ಬಿಬ್ಬಾದ ತಮಿಳುನಾಡು ತಜ್ಞ

7
ಶುಕ್ರವಾರ, 7–1–1994

ತಬ್ಬಿಬ್ಬಾದ ತಮಿಳುನಾಡು ತಜ್ಞ

Published:
Updated:

ತಬ್ಬಿಬ್ಬಾದ ತಮಿಳುನಾಡು ತಜ್ಞ

ನವದೆಹಲಿ, ನ. 6– ಕರ್ನಾಟಕದ ಕಾವೇರಿ ನದಿ ಪಾತ್ರದಲ್ಲಿ ಬೀಳುವ ಮಳೆಯ ಪ್ರಮಾಣ, ಈ ನದಿ ಪಾತ್ರದಲ್ಲಿ ಬರುವ ಹೇಮಾವತಿ, ಕಬಿನಿ ಜಲಾಶಯಗಳ ಬಗೆಗೆ ಸ್ಪಷ್ಟ ಮಾಹಿತಿಯ ಅಭಾವವಿದೆ ಎನ್ನುವ ಮೂಲಕ ಕಾವೇರಿ ತಾಂತ್ರಿಕ ಸಮಿತಿಯ ಅಧ್ಯಕ್ಷ ತಮಿಳುನಾಡಿನ ಮೋಹನಕೃಷ್ಣನ್ ಕರ್ನಾಟಕದ ಪರ ವಕೀಲ ಅನಿಲ್ ದಿವಾನ್ ಅವರಿಂದ ಇಂದು ಕಾವೇರಿ ನ್ಯಾಯಮಂಡಲಿಯ ಮುಂದೆ ತೀವ್ರ ಕಸಿವಿಸಿಗೆ ಒಳಗಾದರು.

ಶಿವನಸಮುದ್ರದಿಂದ ಮೇಕೆದಾಟು ಮತ್ತು ಮೆಟ್ಟೂರು ಜಲಾಶಯದವರೆಗಿನ ಇಳಿಜಾರು ಪ್ರದೇಶದ ಅಂತರ ತಮಗೆ ತಿಳಿಯದು ಎಂದೂ ಅವರು ಒಪ್ಪಿಕೊಂಡಿದ್ದರು.

ನ್ಯಾಯಮೂರ್ತಿ ಚಿತ್ತತೋಷ್ ಮುಖರ್ಜಿ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಕಾವೇರಿ ಜಲವಿವಾದ ನ್ಯಾಯಮಂಡಲಿಯ ಮುಂದೆ ಕರ್ನಾಟಕದ ವಕೀಲರು ಪಾಟೀ ಸವಾಲು ನಡೆಸಿದರು.

**

ವೀಕ್ಷಕರಾಗಿ ಜಗನ್ನಾಥ ಮಿಶ್ರ: ಇಂದು ಬೆಂಗಳೂರಿಗೆ ಆಗಮನ

ನವದೆಹಲಿ, ಜ. 6– ಕರ್ನಾಟಕ ಕಾಂಗೈ ನಾಯಕತ್ವ ಕುರಿತ ಬಿಕ್ಕಟ್ಟನ್ನು ಬಗೆಹರಿಸಲು ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ ಮಿಶ್ರ ಅವರನ್ನು ವೀಕ್ಷಕರಾಗಿ ಬೆಂಗಳೂರಿಗೆ ಕಳುಹಿಸಲು ನಿರ್ಧರಿಸಿರುವುದಾಗಿ ಪಕ್ಷದ ವಕ್ತಾರ ವಿ.ಎನ್. ಗಾಡ್ಗೀಳ್ ಇಂದು ಇಲ್ಲಿ ಪ್ರಕಟಿಸಿದರು.

ಡಾ. ಮಿಶ್ರ ನಾಳೆ ಬೆಳಿಗ್ಗೆ ಬೆಂಗಳೂರಿಗೆ ಹೋಗುವರು. ಮತ್ತೊಬ್ಬ ವೀಕ್ಷಕರನ್ನು ವರಿಷ್ಠ ಮಂಡಲಿ ಇನ್ನೂ ಹೆಸರಿಸಬೇಕಿದ್ದು, ಅವರು ದಿನೊಪ್ಪತ್ತಿನಲ್ಲೇ ಮಿಶ್ರ ಅವರ ಜತೆಗೂಡುವರು ಎಂದು ಅವರು ತಿಳಿಸಿದರು. ಆದರೆ ಇನ್ನೊಬ್ಬ ವೀಕ್ಷಕರು ಯಾರು ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದರು ಗಾಡ್ಗೀಳ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !