ಶನಿವಾರ, 8–1994

7

ಶನಿವಾರ, 8–1994

Published:
Updated:

ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
ನವದೆಹಲಿ, ಜ. 7 (ಪಿಟಿಐ)–
ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು
ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತಕುಮಾರ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗಳನ್ನಾಗಿ ಬಿಜೆಪಿ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಇಂದು ನೇಮಿಸಿದರು.

ವೀಕ್ಷಕ ಮಿಶ್ರಾ ಅವರಿಂದ ಅಭಿಪ್ರಾಯ ಸಂಗ್ರಹ ಆರಂಭ
ಬೆಂಗಳೂರು, ಜ. 7–
‘ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸುವ ಸಲುವಾಗಿ ಬಂದಿದ್ದೇನೆ. ನಾಯಕತ್ವ ಕುರಿತ ಚರ್ಚೆಗೆ ಅಲ್ಲ. ನಾನು ಯಾವುದೇ ಸೂತ್ರಗಳನ್ನು ಇಟ್ಟಕೊಂಡು ಬಂದಿಲ್ಲ. ಮುಕ್ತ ಮನಸ್ಸಿನಿಂದ ಬಂದಿದ್ದೇನೆ. ಸಚಿವರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳ ಅಭಿಪ್ರಾಯ ಕೇಳಿದ ನಂತರ ನಿಷ್ಪಕ್ಷಪಾತ ವರದಿ ನೀಡುತ್ತೇನೆ. ತೀರ್ಮಾನ ಏನಿದ್ದರೂ ಹೈಕಮಾಂಡ್‌ಗೆ ಸೇರಿದ್ದು’ ಎಂದು ವೀಕ್ಷಕರಾಗಿ ಬಂದಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್ ಮಿಶ್ರಾ ಅವರು ಇಂದು ಇಲ್ಲಿ ಹೇಳಿದರು.

ಉನ್ನತಾಧಿಕಾರ ಸಮಿತಿ ರಚನೆಗೆ ನಿರ್ಧಾರ
ನವದೆಹಲಿ, ಜ. 7–
ಕರ್ನಾಟಕದ ಕಾವೇರಿ ಕಣಿವೆಗೆ ಹರಿದು ಹೋಗುವ ನೀರಿನ ಪ್ರಮಾಣವನ್ನು ಅಳತೆ ಮಾಡಿ ಅದನ್ನು ಸಂಬಂಧಿಸಿದ ವಿವಾದಿತ ರಾಜ್ಯಗಳ ನಡುವೆ ಸಮಂಜಸ ಹೊಂದಾಣಿಕೆ ಮಾಡಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರವು ಉನ್ನತ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲು ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !