ಸೋಮವಾರ, 10–1–1994

7

ಸೋಮವಾರ, 10–1–1994

Published:
Updated:

‘ತಪ್ಪದ ಸಂಧಾನ ಯತ್ನ’: ಮಿಶ್ರಾ ದೆಹಲಿ ಯಾತ್ರೆ ಒಂದು ದಿನ ಮುಂದಕ್ಕೆ
ಬೆಂಗಳೂರು, ಜ. 9–
ಬಿಗಡಾಯಿಸಿರುವ ರಾಜ್ಯ ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಬಗೆ ಹರಿಸುವ ಸಂಬಂಧದ ವಿವಿಧ ಸೂತ್ರಗಳಲ್ಲಿ ‘ಸಂಧಾನ ಯತ್ನವನ್ನು ಕೂಡಾ ತಳ್ಳಿ ಹಾಕುವಂತಿಲ್ಲ’ ಎಂದು ಹೈಕಮಾಂಡ್‌ ವೀಕ್ಷಕರಾಗಿ  ಬಂದಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ ಮಿಶ್ರಾ ಇಂದು ಇಲ್ಲಿ ಅಭಿಪ್ರಾಯಪಟ್ಟರು.

ಆದರೆ, ವಿರುದ್ಧ ದಿಕ್ಕುಗಳಿಗೆ ಮುಖ ಮಾಡಿರುವ ಪಕ್ಷದ ಭಿನ್ನ- ನಿಷ್ಠ ಬಣಗಳೆರಡನ್ನೂ ಒಟ್ಟುಗೂಡಿಸುವ ಈ ತೇಪೆ ಪ್ರಯತ್ನವು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಉಪಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿದಂತೆ ಉಭಯ ಬಣಗಳ ಪ್ರತಿಕ್ರಿಯೆಯನ್ನು  ಅವಲಂಬಿಸಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು. ದೆಹಲಿ ಯಾತ್ರೆಯನ್ನು ಅವರು ಒಂದು ದಿನದ ಮಟ್ಟಿಗೆ ಮುಂದೂಡಿ ಇಂದು ಬೆಂಗಳೂರಿನಲ್ಲೇ ಉಳಿದರು.

ಮಂಗಳೂರು– ಶೋರನೂರು ಜೋಡಿ ರೈಲು ಮಾರ್ಗ ಶೀಘ್ರ
ಗುರುವಾಯೂರು, ಜ. 9 (ಯುಎನ್‌ಐ)–
ಮಂಗಳೂರು– ಶೋರನೂರು ಬ್ರಾಡ್‌ಗೇಜ್ ಮಾರ್ಗವನ್ನು ಜೋಡಿ ಮಾರ್ಗವಾಗಿ ಪರಿವರ್ತಿಸುವ ಕಾಮಗಾರಿ ಸದ್ಯದಲ್ಲಿಯೇ ಆರಂಭವಾಗಲಿದೆ.‌ ರೈಲ್ವೆ ಸಚಿವ ಜಾಫರ್ ಷರೀಫ್ ಅವರು ಇಂದು ಇಲ್ಲಿ ಈ ವಿಷಯ ಪ್ರಕಟಿಸಿದರು. ಅವರು ಗುರುವಾಯೂರು– ತ್ರಿಶೂರು ಬ್ರಾಡ್‌ಗೇಜ್ ಮಾರ್ಗ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಂಚಿ ಪರಮಾಚಾರ್ಯರ ಸಮಾಧಿ
ಕಾಂಚೀಪುರಂ, ಜ. 9 (ಪಿಟಿಐ, ಯುಎನ್‌ಐ)–
ಲಕ್ಷಾಂತರ ಮಂದಿ ಭಕ್ತರ ಅಶ್ರುತರ್ಪಣದ ಮಧ್ಯೆ ಕಂಚೀ ಕಾಮಕೋಟಿ ಮಠದ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಅವರ ಭೌತ ಶರೀರವನ್ನು ಇಂದು ಮಧ್ಯಾಹ್ನ ವಿಧಿವತ್ತಾಗಿ ಇಲ್ಲಿನ ಶಂಕರ ಮಠದ ಬಿರ್ಲಾ ಭವನದಲ್ಲಿ ಸಮಾಧಿ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !