ಮಂಗಳವಾರ, 11–1–1994

7

ಮಂಗಳವಾರ, 11–1–1994

Published:
Updated:

ಮುಸುಕು ಸರಿದು ಶಿವಾಜಿ ಪ್ರಕಟ

ಬೆಂಗಳೂರು, ಜ. 10– ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ ಹಾಗೂ ಕನ್ನಡ ಕಾರ್ಯಕರ್ತರ ಬಂಧನದ ಮಧ್ಯೆ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಛತ್ರಪತಿ ಶಿವಾಜಿ ಪ್ರತಿಮೆಗೆ ಹೂಮಾಲೆ ಹಾಕಿ ಇಂದು ಬೆಳಿಗ್ಗೆ ಸದಾಶಿವನಗರದ ಭಾಷ್ಯಂ ಸರ್ಕಲ್‌ ಬಳಿ ಔಪಚಾರಿಕವಾಗಿ ಅನಾವರಣಗೊಳಿಸಿದರು.

ಮಿಶ್ರಾ ಹೇಳಿಕೆಗೆ ಭಿನ್ನರ ಆಕ್ಷೇಪ

ಬೆಂಗಳೂರು, ಜ. 10– ವೀರಪ್ಪ ಮೊಯಿಲಿ ಅವರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳುವುದೂ ಸೇರಿದಂತೆ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಭಿನ್ನಮತೀಯ ನಾಯಕರಾದ ಉಪಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣ ಹಾಗೂ ಎಂ. ರಾಜಶೇಖರ ಮೂರ್ತಿ ಅವರು ಒಪ್ಪಿರುವುದಾಗಿ ರಾಜ್ಯದಲ್ಲಿನ ಬಿಕ್ಕಟ್ಟು ಬಗೆಹರಿಸಲು ವೀಕ್ಷಕರಾಗಿ ಬಂದಿದ್ದ ಡಾ. ಜಗನ್ನಾಥ ಮಿಶ್ರಾ ಇಂದು ಹೇಳಿದರು.

ಆದರೆ ನಾಯಕತ್ವ ಬದಲಾಗಬೇಕೆಂಬ ತಮ್ಮ ಮೂಲ ನಿಲುವಿನಿಂದ ಒಂದಿಂಚೂ ಕದಲಿಲ್ಲ ಎಂದು ಹೇಳುವ ಮೂಲಕ ವೀಕ್ಷಕರ ಹೇಳಿಕೆಯನ್ನು ಈ ಇಬ್ಬರೂ ನಾಯಕರು ಅಲ್ಲಗಳೆದಿದ್ದಾರೆ.

ಟಿಕಾಯತ್ ಪದವಿ ತ್ಯಾಗ

ಹೈದರಾಬಾದ್, ಜ. 10 (ಯುಎನ್‌ಐ)– ಭಾರತೀಯ ರೈತ ಸಂಘದ ಮುಖ್ಯಸ್ಥ ಮಹೇಂದ್ರ ಸಿಂಗ್ ಟಿಕಾಯತ್ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ.

ರೈತಸಂಘ ರಾಜಕೀಯ ಸಂಸ್ಥೆಯಾಗಿ ಬದಲಾಗುವುದನ್ನು ತಡೆಯಲು ತಾವು ವಿಫಲರಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಬೇಕಾಯಿತೆಂದು ತಿಳಿಸಿದ ಅವರು, ರೈತಸಂಘದ ರಾಷ್ಟ್ರೀಯ ಅಧ್ಯಕ್ಷರ  ಸ್ಥಾನಕ್ಕೆ ಮೊರಾದಾಬಾದಿನ ವಿಜಯಪಾಲ್ ಸಿಂಗ್ ಅವರ ಹೆಸರನ್ನು ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !