ಬುಧವಾರ, 12–1–1994

7

ಬುಧವಾರ, 12–1–1994

Published:
Updated:

ಮೊಯಿಲಿ ಅಬಾಧಿತ– ಮಿಶ್ರಾ ಇಂಗಿತ: ಪಕ್ಷ  ಬಲಪಡಿಸುವಂಥ ‘ಪಂಚಸೂತ್ರ’ದ ವರದಿ
ನವದೆಹಲಿ, ಜ. 11–
ಕರ್ನಾಟಕದ ಬಿಕ್ಕಟ್ಟಿನ ಬಗೆಗೆ ಇಂದು ಪ್ರಧಾನಿ ಹಾಗು ಕಾಂಗೈ ಅಧ್ಯಕ್ಷ ಪಿ.ವಿ. ನರಸಿಂಹರಾವ್ ಅವರಿಗೆ ತಮ್ಮ ವರದಿ ಸಲ್ಲಿಸಿದ ವೀಕ್ಷಕ ಡಾ. ಜಗನ್ನಾಥ್ ಮಿಶ್ರಾ ಅವರು, ಮುಖ್ಯಮಂತ್ರಿ ವೀರಪ್ಪ ಮೊಯಿಲಿ ನಾಯಕತ್ವ ಕುರಿತು ಉಂಟಾಗಿರುವ ಬಿಕ್ಕಟ್ಟಿಗೆ ಆತುರದ ನಿರ್ಧಾರ ಬೇಡ ಎಂಬುದು ಸೇರಿದಂತೆ 5 ಅಂಶಗಳ ಪರಿಹಾರ ಸೂತ್ರವನ್ನು ಸೂಚಿಸಿದ್ದಾರೆ.

ಮಧ್ಯಾಹ್ನ ಒಂದು ಗಂಟೆಗೆ ಪ್ರಧಾನಿ ಅವರನ್ನು ಭೇಟಿಯಾದ ಮಿಶ್ರಾ, ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಸಹಾಯಕವಾಗುವಂತೆ ತಮ್ಮ ವರದಿಯಲ್ಲಿ ಪರಿಹಾರ ಮಾರ್ಗವನ್ನು ಸೂಚಿಸಲಾಗಿದೆ ಎಂದು ವರದಿಗಾರರಿಗೆ ತಿಳಿಸಿದರು.

ಚಿತ್ರ ಪ್ರಶಸ್ತಿ ಪ್ರದಾನ
ನವದೆಹಲಿ, ಜ. 11 (ಯುಎನ್‌ಐ
)– ಸರ್ದಾರ್ ಪಟೇಲ್ ಅವರನ್ನು ಕುರಿತ ಪೂರ್ಣಾವಧಿ ಚಲನಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕ ಲಭಿಸಿದೆ.

ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಚಿತ್ರವನ್ನು ವೀಕ್ಷಿಸಿದ ಬಳಿಕ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಿರ್ಮಾಪಕರ ಪರವಾಗಿ ಮಾಜಿ ಕೇಂದ್ರ ಹಣಕಾಸು ಸಚಿವ ದಿವಂಗತ ಎಚ್.ಎಂ. ಪಟೇಲ್ ಅವರ ಪುತ್ರಿ ಡಾ. ಅಮೃತಾ ಪಟೇಲ್ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !