ಕಳಪೆ ಕಾಮಗಾರಿ: ಕೆಂಡಮಂಡಲ

7

ಕಳಪೆ ಕಾಮಗಾರಿ: ಕೆಂಡಮಂಡಲ

Published:
Updated:

ವಾಡಿ: ಎಸ್‌ಎಫ್‌ಸಿ ಹಾಗೂ ಬಿಆರ್‌ಜಿಎಫ್ ಯೋಜನೆಗಳಡಿಯಲ್ಲಿ ನಿರ್ಮಾಣಗೊಂಡ ಚರಂಡಿಗಳು, ರಸ್ತೆಗಳು, ಮುಂಗಾರು ಮಳೆಯ ಒಂದೇ ಹೊಡೆತಕ್ಕೆ ಕಿತ್ತುಹೋಗಿದ್ದ ದೃಶ್ಯಗಳು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಇದನ್ನು ನೋಡಿದರೆ ಕಾಮಗಾರಿಗಳು ಸಂಪೂರ್ಣ ಕಳೆಪೆ ಮಟ್ಟದ್ದಾಗಿದೆ ಎಂಬುವುದು ಸ್ಪಷ್ಟವಾಗಿ ಕಾಣುತ್ತದೆ. ಅಂಥ ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟು ಸೂಕ್ತ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ವಾಡ್ ನಂ.7ರಲ್ಲಿ ಉರುಸ್ ಮಹಲ ಪಕ್ಕದ ಸಿಸಿ ರಸ್ತೆ  ಚರಂಡಿ ನೀರಿನಿಂದ ಸಂಪೂರ್ಣ ಮುಳುಗಿ ಹೋಗಿದ್ದ ದೃಶ್ಯ ಕಂಡ ಶಾಸಕರು ಅಧಿಕಾರಿಗಳ ಕಾರ್ಯವೈಕಾರಿ ಬಗ್ಗೆ ಅಸಮದಾನ ವ್ಯಕ್ತಪಡಿಸಿದರು.ಸರ್ಕಾರದಿಂದ ಮಂಜುರಾದ 2 ಕೋಟಿ ಹಣ ಬಳಸಿಕೊಂಡು ಆದ್ಯತೆ ಇರುವ ಎಲ್ಲ ಕಡೆ ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕು. ಅತಿಕ್ರಮಣ ಕಟ್ಟಡಗಳ ತೆರವುವಿನಿಂದ ಮುಖ್ಯ ರಸ್ತೆಗಳ ಮೇಲೆ ಬಿದ್ದ ಕಟ್ಟಡ ಅವಶೇಷಗಳನ್ನು ಕೂಡಲೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪುರಸಭೆ ಮುಖ್ಯಾಧಿಕಾರಿ ಹೀರಾ ನಾಯಕ, ಎಂಜಿನಿಯರ್ ಸಿದ್ದಪ್ಪಾ ಸೋಮಪುರೆ, ಖಾಜ ಸತ್ರೋದ್ಧಿನ್ ನೈರ್ಮಲ್ಯ ಅಧಿಕಾರಿ ಮಹಾೀರ, ಬಿಜೆಪಿ ಮುಖಂಡರಾದ ಸಿದ್ದಣ್ಣ ಕಲಶೆಟ್ಟಿ, ರಾಮಚಂದ್ರ ರೆಡ್ಡಿ ಮುನಿಯಪ್ಪಾ, ವಿಠ್ಠಲ ನಾಯಕ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry