ಖಾಕಿ-ಖಾವಿ-ಖಾದಿ ಶುದ್ಧವಿರಬೇಕು

ಗುರುವಾರ , ಜೂಲೈ 18, 2019
28 °C

ಖಾಕಿ-ಖಾವಿ-ಖಾದಿ ಶುದ್ಧವಿರಬೇಕು

Published:
Updated:

ಗುಲ್ಬರ್ಗ: ಖಾಕಿ-ಖಾವಿ-ಖಾದಿ ಬಟ್ಟೆಗಳನ್ನು ತೊಡುವ ವ್ಯಕ್ತಿಗಳು ಶುದ್ಧವಿದ್ದರೆ ಇಡಿ ಜಗತ್ತು ಶುದ್ಧವಾಗಿರುವುದಕ್ಕೆ ಸಾಧ್ಯವಾಗುತ್ತದೆ ಎಂದು ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯ ಹೇಳಿದರು.ನಗರದ ವಿದ್ಯಾನಗರ ಬಡಾವಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಮರನಾಥ ಪಾಟೀಲ ಅಭಿಮಾನಿಗಳ ಬಳಗ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಇಡಿ ದೇಶವನ್ನು ನಿಯಂತ್ರಣದಲ್ಲಿ ಇಡುವವರು ಮತ್ತು ಸನ್ಮಾರ್ಗ ತೋರಿಸುವವರೆ ಹಾದಿ ತಪ್ಪುತ್ತದೆ. ಆದ್ದರಿಂದ ಈ ಮೂರು ಬಟ್ಟೆಗಳನ್ನು ತೊಡುವವರು ಶುದ್ಧವಾಗಿರಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಅಮರನಾಥ ಪಾಟೀಲರ ಅಭಿಮಾನಿಗಳ ಬಳಗ ಆಸ್ತಿತ್ವಕ್ಕೆ ಬಂದಿರುವುದು ಸಂತೋಷಕರ ವಿಷಯ ಎಂದರು.ಅಮರನಾಥ ಪಾಟೀಲ ಮಾತನಾಡಿ, ಅಭಿಮಾನಿ ಸಂಘಗಳು ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ನಿಜವಾದ ಫಲಾನುಭವಿಗಳಿಗೆ ಇದರ ಲಾಭ ಒದಗಿಸಿಕೊಡಲು ಯತ್ನಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ, ಪಾಲಿಕೆ ಸದಸ್ಯರಾದ ರಾಜಗೋಪಾಲರಡ್ಡಿ, ಶಂಕರ ಚವ್ಹಾಣ, ರಾಜುಗೌಡ ನಾಗನಳ್ಳಿ ಮತ್ತು ಪಾಲಿಕೆ ಮಾಜಿ ಸದಸ್ಯ ಗುರುಶರಣ ದುಧನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry