ಗುರುವಾರ , ನವೆಂಬರ್ 14, 2019
22 °C

ಜನಜಾಗೃತಿಯಿಂದ ಮಾತ್ರ ಅಭಿವೃದ್ಧಿ

Published:
Updated:

ಸೇಡಂ: ತಾಲ್ಲೂಕಿನಲ್ಲಿ ಹರಿಯುವ ಕಾಗಿಣಾ ಮತ್ತು ಕಮಲಾವತಿ ನದಿಗಳಿಗೆ ಬ್ರಿಜ್ ಕಮ್ ಬ್ಯಾರೇಜ್ ಮತ್ತು ಬ್ಯಾರೇಜ್‌ಗಳ ನಿರ್ಮಾಣದಿಂದ ಕೃಷಿ ಅಭಿವೃದ್ದಿಪಡಿಸಿ ಸ್ವಾವಲಂಬಿ ಬದುಕಿಗೆ ಸ್ಪಂದಿಸುವುದೇ ತಮ್ಮ ಪ್ರಥಮ ಆದ್ಯತೆ ಮತ್ತು ಗುರಿಯಾಗಿದೆ ಎಂದು ಶಾಸಕ ಡಾ. ಶರಣಪ್ರಕಾಶ ಪಾಟೀಲ ಊಡಗಿ ತಿಳಿಸಿದರು.

ತ್ವರಿತ ನೀರಾವರಿ ಸೌಲಭ್ಯ ಯೋಜನೆ ಅಡಿಯಲ್ಲಿ ಜಲ ಸಂಪನ್ಮೂಲ ಇಲಾಖೆ ಸೇಡಂ ತಾಲ್ಲೂಕಿನ ಮಾಧವಾರ, ಇಮಡಾಪೂರ ಗ್ರಾಮಗಳ ಹತ್ತಿರ ನಿರ್ಮಿಸಲಿರುವ 1.5 ಕೋಟಿ ರೂ.ಗಳ ವೆಚ್ಚದ ಬ್ಯಾರೇಜ್ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೆರಿಸಿ ಮಾತನಾಡಿದರು.ಈಗಾಗಲೇ ತಾಲ್ಲೂಕಿನಲ್ಲಿ ಕಾಗಿಣಾ ನದಿಗೆ ಮಳಖೇಡ, ಮೀನಹಾಬಾಳ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಗೊಂಡಿವೆ. ಇದೇ ನಿಟ್ಟಿನಲ್ಲಿ ಇನ್ನೂ 8 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು ಟೆಂಡರ್ ಕರೆಯಲಾಗಿದೆ.ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ತಾಲ್ಲೂಕು ಮತ್ತು ಮತಕ್ಷೇತ್ರ ವ್ಯಾಪ್ತಿಯ ಸಮಗ್ರ ಅಭಿವೃದ್ದಿಗೆ ರಸ್ತೆ, ಕುಡಿಯುವ ನೀರು, 15 ಕೆರೆಗಳ ಪುನರುಜ್ಜೀವನ ಕಾಮಗಾರಿಗಳಿಗೆ 5.81 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿವೆ ಎಂದರು. ಈ ಎಲ್ಲಾ ಮೂಲಗಳಿಂದ 2500 ಹೆಕ್ಟರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.ನದಿಗಳ ಎರಡು ಬದುಗಳಲ್ಲಿ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಅಳವಡಿಸಲು ವಿಶೇಷ ಕ್ರಮ ಜಾರಿಯಲ್ಲಿದೆ. ತಾಲ್ಲೂಕಿನಲ್ಲಿ 26 ಜಲ ನಿರ್ಮಲ ಯೋಜನೆಗಳ ಒಪ್ಪಿಗೆ ಪಡೆಯಲಾಗಿದೆ ಎಂದರು.ತಾಲ್ಲೂಕಿನ ಭೂತಪೂರ, ರಂಜೋಳ, ಗುಂಡಳ್ಳಿ ಕಾಮಗಾರಿಗಳಿಗೆ 9.23 ಕೋಟಿ ರೂ.ಗಳ ಕಾಮಗಾರಿ, ಮಲ್ಲಾಬಾದ ಆಣೆಕಟ್ಟಿಗೆ 75 ಲಕ್ಷ ರೂ. ಮತ್ತು ಮಳಖೇಡ ಬಳಿಯ ಸಂಗಾವಿ (ಎಂ) ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಗೆ ಅಡ್ಡಲಾಗಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ 12.5 ಕೋಟಿ ರೂ.ಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಈರಾರೆಡ್ಡಿ ಹೂವಿನಬಾವಿ ಬಟಗೇರಾ, ಮಾಜಿ ಸದಸ್ಯ ಶ್ರೀನಿವಾಸರಾವ ದೇಶಪಾಂಡೆ, ವೆಂಕಟರೆಡ್ಡಿ ಮಾಧವಾರ, ಸತೀಶರೆಡ್ಡಿ ಪಾಟೀಲ ರಂಜೋಳ, ವಿಶ್ವನಾಥರೆಡ್ಡಿ ಪಾಟೀಲ ಬೊಮ್ಮನಳ್ಳಿ (ಮುನ್ನಾ ಗೌಡ), ಗ್ರಾಪಂ ಅಧ್ಯಕ್ಷೆ ಪುಣ್ಯವತಿ ವೀರಯ್ಯಸ್ವಾಮಿ, ನಾರಾಯಣರೆಡ್ಡಿ ಶೇರಿಕಾರ ಇದ್ದರು.

ಪ್ರತಿಕ್ರಿಯಿಸಿ (+)