ಪಾಕಿಸ್ತಾನ: ಬಸ್‌–ತೈಲ ಟ್ಯಾಂಕರ್‌ ಡಿಕ್ಕಿ: 27 ಮಂದಿ ಸಾವು

7

ಪಾಕಿಸ್ತಾನ: ಬಸ್‌–ತೈಲ ಟ್ಯಾಂಕರ್‌ ಡಿಕ್ಕಿ: 27 ಮಂದಿ ಸಾವು

Published:
Updated:

ಕರಾಚಿ: ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪ್ರಯಾಣಿಕರಿದ್ದ ಬಸ್‌ ಮತ್ತು ತೈಲ ಟ್ಯಾಂಕರ್‌ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

40 ಪ್ರಯಾಣಿಕರಿದ್ದ ಬಸ್‌ ಕರಾಚಿಯಿಂದ ಪಂಜುಗರ್‌ ಕಡೆಗೆ ಹೊರಟಿತ್ತು. ಲಾಸ್ಬೆಲಾ ಜಿಲ್ಲೆಯಲ್ಲಿ ಸೋಮವಾರ ಅಪಘಾತ ನಡೆದಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಡೀಸೆಲ್‌ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್‌ ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕೆಲವರು ಜೀವ ಉಳಿಸಿಕೊಳ್ಳಲು ಬಸ್‌ನಿಂದ ಹೊರ ಜಿಗಿದಿದ್ದಾರೆ. ಉಳಿದವರು ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ 16 ಪ್ರಯಾಣಿಕರ ಪೈಕಿ, ಆರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !